ಮಹಾಭಾರತ ಮಹಾಕಾವ್ಯವು ಭಾರತೀಯರಿಗೆ ಪವಿತ್ರ ಹಾಗೂ ಜೀವನ ಮಾರ್ಗವನ್ನು ಬೋಧಿಸುವ ಬೃಹತ್ ಗ್ರಂಥ. ಮಹಾಭಾರತ (ಆದಿಪರ್ವ) ಕುರಿತಂತೆ ಬೆಳ್ಳಾವೆ ನರಹರಿಶಾಸ್ತ್ರಿಗಳು ಈ ಕಾವ್ಯದಲ್ಲಿಯ ಕೆಲವು ಮಹತ್ವದ ವಿಚಾರಗಳಿಗೆ ಒತ್ತು ನೀಡಿ ಬರೆದಿದ್ದಾರೆ. ಊದಾಹರಣೆಗೆ; ಐವರನ್ನು ಮದುವೆಯಾದ ದ್ರೌಪದಿಯನ್ನು ಲೌಕಿಕರು ಕೀಳಾಗಿ ಕಾಣದೇ, ಪಂಚೇಂದ್ರಿಯಗಳನ್ನು ಹೇಗೆ ನಿಯಂತ್ರಿಸಿ, ಬಂದ ಕಷ್ಟಗಳನ್ನು ಎದುರಿಸುತ್ತಾ ದೈವವನ್ನು ನಂಬಿ ಬದುಕುವುದೇ ಜೀವನ ಸಾಧನೆ ಎಂಬಂತಹ ತತ್ವ ಅಡಕವಾಗಿದೆ. ಇಂತಹ ಹಲವಾರು ಸಂದೇಶಗಳ ಮಹಾಭಾರತವು ನೀತಿ, ಭಕ್ತಿ.ಧರ್ಮ, ತತ್ವ, ಜ್ಞಾನ, ವೈರಾಗ್ಯ ಇಂತಹ ಮೌಲ್ಯಗಳ ಪ್ರತಿಪಾದನೆಯಾಗಿರುತ್ತದೆ.
ಮಹಾಭಾರತವನ್ನು ಐದನೇಯ ವೇದ ಎಂದೂ ಹೇಳಲಾಗುತ್ತಿದೆ. ಕೃತಿಯಲ್ಲಿ ಮಹಾಭಾರತದ ಸಂಕ್ಷಿಪ್ತ ಕಥೆ, ಶಂತನು ರಾಜನಿಗೆ ಪುತ್ರ ದೊರೆತಿದ್ದು, ಸತ್ಯವತೀ ಚರಿತ್ರೆ, ಭೀಷ್ಮ ಮತ್ತು ಅಂಬೆ, ಪಾಂಡವರ-ಕೌರವರ ಜನನ, ವಿದ್ಯಾ ಪ್ರದರ್ಶನ, ಕರ್ಣ , ಗುರುದಕ್ಷಿಣೆ, ಪಾಂಡವರ ರಾಜ್ಯಾಡಳಿತ, ಹಿಡಿಂಬಾಸುರನ ವಧೆ, ವೇದ ವ್ಯಾಸರ ಸಂದರ್ಶನ, ವ್ಯಾಸರ ಸಂದರ್ಶನ, ವಶಿಷ್ಠ ಮಹರ್ಷಿಯ ಚರಿತ್ರೆ, ಪಂಚೇಂದ್ರೋಪಾಖ್ಯಾನ, ದುರ್ಯೋಧನನ ದುಃಖ, ಖಾಂಡವ ದಹನ ಹೀಗೆ ವಿವಿಧ ಹಾಗೂ ವಿಸ್ತೃತವಾದ ಅಧ್ಯಾಯಗಳನ್ನು ಒಳಗೊಂಡಿದೆ.
©2025 Book Brahma Private Limited.