ಶ್ರೀರಾಮಚಾರಣ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 168

₹ 200.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಪ್ರಾಚೀನಕಾವ್ಯವೊಂದಕ್ಕೆ ಆಧುನಿಕ ಸೃಜನಶೀಲ ಮನಸ್ಸೊಂದು ಪ್ರತಿಕ್ರಿಯಿಸಿರುವ ಫಲದಂತೆ ಕಾಣುತ್ತದೆ ಎಚ್‌.ಎಸ್. ವೆಂಕಟೇಶಮೂರ್ತಿ ಅವರ ’ಶ್ರೀರಾಮಚಾರಣ’. ಪ್ರಸ್ತುತ ಸಮಾಜಕ್ಕೆ ಅನುಗುಣವಾಗಿ ಇಲ್ಲ ಕಾವ್ಯರಚನೆಯ ಕಾರ್ಯ ನಡೆದಿದೆ. 

ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್, ’ಶ್ರೀರಾಮಚಾರಣ ಮಹಾಕಾವ್ಯ ಪ್ರಾಚೀನ ಮಹಾಕಾವ್ಯದ ಜೊತೆಗೆ ಆಧುನಿಕ ಸಂವೇದನೆ ಯಾವ ರೀತಿ ಅನುಸಂಧಾನ ಮಾಡಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆ’ ಎಂದು ಪ್ರತಿಕ್ರಿಯಿಸಿದ್ದರು. ಕೃತಿ ಕುರಿತು ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವೈದೇಹಿ, ’ಸುಲಭವೆಂದು ತೋರುವ ಆದರೆ ಖಂಡಿತವಾಗಿಯೂ ಸುಲಭವಲ್ಲದ ಮಗುವನುಣಿಸಿದಂತಹ ರಚನಾಕ್ರಮದಲ್ಲಿ ರಾಮಾಯಣ ಇಲ್ಲಿ ತೆರೆದುಕೊಂಡಿದೆ’ ಎಂದಿದ್ದಾರೆ.
ವಿಮರ್ಶಕ ಟಿ.ಪಿ. ಅಶೋಕ ಅವರ ಪ್ರಕಾರ 'ಸಮೃದ್ದವೂ, ವೈವಿಧ್ಯಮಯವೂ ಆಗಿರುವ ಕನ್ನಡ ವಾಟ್ಯಯಸ್ಥೆ ಎಚ್ಎಸ್.ವಿ ಅವರ ಶ್ರೀರಾಮಚಾರಣ ಮಹಾಕಾವ್ಯವು ಮತ್ತೊಂದು ಮೌಲಿಕ ಸೇರ್ಪಡೆ'  ಎಂದು ತಿಳಿಸಿದ್ದಾರೆ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Conversation

Related Books