ವೆಂಕಟೇಶ ತಿರಕೋ ಕುಲಕರಣಿ (ಗಳಗನಾಥ) ಅವರು ಬರೆದ ಕೃತಿ-ಮಹಾಭಾರತದ ಸಭಾಪರ್ವದೊಳಗಿನ ರಹಸ್ಯಗಳು. ಮಹಾಭಾರತದ ಕಥೆಯಲ್ಲಿ ಅತ್ಯಂತ ಪ್ರಮುಖ ಭಾಗಗಳಾಗಿ ಅನೇಕ ರಹಸ್ಯಗಳಿವೆ. ಈ ಕಾರಣಗಳಿಗಾಗಿಯೇ ಮಹಾಭಾರತವು ಶ್ರೇಷ್ಠ ಕೃತಿಯಾಗಿ ನಿಲ್ಲುತ್ತದೆ. ಮಹತ್ವದ ರಹಸ್ಯಗಳನ್ನು ತಿಳಿಯುವುದರಿಂದ ಮಹಾಭಾರತವನ್ನು ಬೇಗ ಬೇಗ ಅರ್ಥ ಮಾಡಿಕೊಳ್ಳಬಹುದು.
ಕೃತಿಯಲ್ಲಿ ಧಾರ್ಮಿಕತೆಯೇ ನಿಜವಾದ ಸೌಜನ್ಯವು, ಧರ್ಮದ ಪ್ರಗತಿಗೆ ಬಾಧಕವಲ್ಲ; ಸಾಧಕವು, ರಾಷ್ಟ್ರೀಯರ ಕರ್ತವ್ಯಚ್ಯುತಿಯು ರಾಷ್ಟ್ರ ವಿಘಾತಕವು, ಹಳ್ಳಿಯ ಉತ್ಕರ್ಷವೇ ರಾಷ್ಟ್ರದ ಉತ್ಕರ್ಷವು, ಅವಿವೇಕಿ ಲೋಕಮತವು ಅನರ್ಥಕಾರಿಯು ಹಾಗೂ ರಾಜನ ವರ್ಣಾನುರಾಗವು ಉಜ್ವಲ ಪ್ರಜಾನುರಾಗ ದ್ಯೋತಕವು ಹೀಗೆ ವಿವಿಧ ಅಧ್ಯಾಯಗಳಿದ್ದು, ಮಹಾಭಾರತದ ಕಾವ್ಯದಲ್ಲಿಯ ಬಹುತೇಕ ರಹಸ್ಯಗಳನ್ನು ಪರಿಚಯಿಸುತ್ತದೆ.
©2024 Book Brahma Private Limited.