` ವಸಂತ ಸಂಭ್ರಮ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ತಂದೆ ತಾಯಿಯರಿಲ್ಲದ ಅನಾಥೆ ಸುನಂದ ಚಿಕ್ಕಮ್ಮನ ಅನಾದರಕ್ಕೆ ಒಳಗಾದರೂ ಓದಿ ಒಂದು ಒಳ್ಳೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಕಛೇರಿಯ ಬಾಸ್ ಮುಕುಂದರಾವ್ ಅವಳನ್ನು ಚನ್ನಾಗಿ ನೋಡಿಕೊಳ್ಳುತ್ತಾರೆ. ಒಂಟಿ ಹೆಣ್ಣು ಎಂದು ಹಲವಾರು ಸಂಬಂಧಗಳು ಬರುತ್ತವೆ. ಅವುಗಳಲ್ಲಿ ರಾಮನಾಥ ಎನ್ನುವವನನ್ನು ಅವಳು ಮದುವೆಯಾದರೂ ಸಂಸಾರ ಉಳಿಯುವುದಿಲ್ಲ. ರಾಮನಾಥ ಹೆಂಡತಿನ ಹಣಕ್ಕಾಗಿ ಆಗಾಗ ಪೀಡಿಸುವಾಗ ಸುನಂದ ಅವನಿಂದ ದೂರವಾಗುತ್ತಾಳೆ. ಆದರೆ ಮುಂದೊಂದು ದಿನ ರಾಮನಾಥ ಸುನಂದಳ ಆಫೀಸಿನ ಮುಂದೆಯೇ ಆಪಘಾತದಲ್ಲಿ ಸಾಯುತ್ತಾನೆ. ಅವನ ಪರ್ಸಿನಲ್ಲಿದ್ದ ಫೋಟೋದಿಂದಾಗಿ ಸುನಂದ ವಿಚಾರಣೆ ಎದುರಿಸಬೇಕಾಗುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಬದುಕನ್ನು ನೂಕುತ್ತಿರುವ ಸುನಂದಳ ಬದುಕು ನೆಟ್ಟಗಾಯಿತೇ ಅವಳ ಬದುಕಿನಲ್ಲಿ ವಸಂತ ಸಂಭ್ರಮ ಬಂದಿತೇ ಎನ್ನುವುದು ಕುತೂಹಲ.
©2024 Book Brahma Private Limited.