ಸಾಹಿತಿ ಉದಯ್ ಕುಮಾರ್ ಹಬ್ಬು ಅವರ `ಬಿಟ್ಟೇನೆಂದರೂ ಬಿಡದೀ ಮಾಯೇ' ಮಹಾಭಾರತದ ದ್ರೋಣಾಚಾರ್ಯರ ಕುರಿತ ಕಾದಂಬರಿ. ಸಾಹಿತಿ ಶ್ರೀಧರ್ ಡಿ.ಎಸ್ ಅವರು ಕೃತಿಗೆ ಮುನ್ನುಡಿ ಬರೆದು ‘‘ಮಹಾಭಾರತದಂತಹ ಅಧ್ಯಯನ-ಜೊತೆಗೆ ಇದಕ್ಕೆ ಸಂಬಂಧಿಸಿದ ಪಾರಂಪರಿಕ, ನವೋದಯ ನವ್ಯ ಲೇಖಕರ ಕೃತಿಗಳನ್ನೂ, ಈ ಕುರಿತು ಚಿಂತನೆ ನಡೆಸಿದ ವಿದ್ವಾಂಸರ ಅಭಿಪ್ರಾಯಗಳನ್ನೂ ಲೇಖಕರು ನಿರಂತರ ಕುತೂಹಲದಿಂದ ಅಧ್ಯಯನ ಮಾಡಿದ್ದಾರೆ. ಪುರಾಣಲೋಕದ ಪಾತ್ರಗಳನ್ನು ಕಟ್ಟುವಲ್ಲಿ ಈ ಪರಿಶ್ರಮ ಅವಶ್ಯಕ ಕೂಡ. ಲೇಖಕರ ಹೊಸ ಬಗೆಯ ಚಿಂತನೆಯಲ್ಲಿ ದ್ರೋಣರ ಪತ್ನಿ ಕೃಪಿಯ ಪಾತ್ರ ಉಜ್ವಲವಾಗಿ ನಿರೂಪಿಸಲ್ಪಟ್ಟಿದೆ’ ಎಂದು ಪ್ರಶಂಸಿದ್ದಾರೆ.
©2024 Book Brahma Private Limited.