ಶ್ರೀ ಚಕ್ರವರ್ತಿ ರಾಜಗೋಲಾಚಾರ್ಯ (ಸಿ. ರಾಜಗೋಪಾಲಾಚಾರಿ) ಅವರ ಮೂಲ ಕೃತಿಯನ್ನು ರಾಜಾಜಿ ರಾಮಾಯಣ ಶ್ರೀರಾಮನ ದಿವ್ಯಕಥೆ ಶೀರ್ಷಿಕೆಯಡಿ ಲೇಖಕ ಕೆ. ಸಂಪದ್ಗಿರಿರಾವ್ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮಾಯಣವು ಹತ್ತು ಹಲವು ರೂಪುಗಳನ್ನು ಪಡೆದಿದ್ದರೂ ಮೂಲ ಕಥೆಯಿಂದ ದೂರ ಸರಿಯದೇ ತನ್ನದೇ ವಸ್ತುವಿನ ಪರಿಮಳವನ್ನು ಕಾಯ್ದುಕೊಂಡಿದೆ. ಆ ಪೈಕಿ ರಾಜಾಜಿ ಅವರ ರಾಮಾಯಣವೂ ಒಂದು. ಶ್ರೀರಾಮನ ದಿವ್ಯ ವ್ಯಕ್ತಿತ್ವವನ್ನು ಕಾಣಿಸಲಾದ ಈ ಕೃತಿಯು ಸರಳ ಭಾಷೆಯಿಂದ ಕೂಡಿದ್ದು, ಓದುಗರನ್ನು ಸೆಳೆಯುತ್ತದೆ.
©2025 Book Brahma Private Limited.