ಲೇಖಕ ಡಾ.ಜಿ ಕೃಷ್ಣಪ್ಪ ಅವರ ’ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ’ ರಾಮಾಯಣ ಪಾತ್ರಗಳ ಕುರಿತ ಮಹಾಕಾವ್ಯವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಟಿ.ಎನ್ ವಾಸುದೇವಮೂರ್ತಿ ಅವರು, ಎಲ್ಲ ಮಹತ್ವದ ಪ್ರಾಚೀನ ಪಠ್ಯಗಳೂ ಕಾಲ ಸರಿದಂತೆ ಸೂತಕಗೊಳ್ಳುತ್ತವೆ, ಮತ್ತಾವುದೋ ಉದ್ದೇಶ, ಹಿತಾಸಕ್ತಿಗಳಿಗೆ ಎರವಾಗುತ್ತಾ ಹೋಗುತ್ತವೆ. ಹಾಗೆಂದು, ಅಂತಹ ಪಠ್ಯಗಳನ್ನು ವಿಸರ್ಜಿಸಲಾಗದು. ಅದು ಪ್ರತಿ ಯುಗಧರ್ಮದಲ್ಲೂ ತತ್ಕಾಲೀನ ಮೌಲ್ಯಗಳಿಗೆ ಅನುಗುಣವಾಗಿ ಹೊಸ ಅವತಾರ ಪಡೆಯುತ್ತಿರುತ್ತದೆ. ’ ಶ್ರೀ ರಾಮಾಯಣ ದರ್ಶನಂ’ ನಮ್ಮ ಯುಗಕ್ಕೆ ಪ್ರಾಪ್ತಿಯಾಗಿರುವ ಅಂತಹ ಒಂದು ಭಾಗ್ಯವಾಗಿದೆ. ಇದರ ಕೆಲವು ಮಹತ್ವದ ಪಾತ್ರಗಳು ಈ ಕೃತಿಯಲ್ಲಿ ತಿಳಿಗನ್ನಡ ರೂಪದಲ್ಲಿ ಸಿಗುತ್ತಿರುವುದು ಹೊಸಕಾಲದ ಓದುಗರ ಸೌಭಾಗ್ಯವಾಗಿದೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳಲ್ಲಿ ಮಲೆನಾಡ ಬದುಕಿನ ವಿರಾಟ್ ದರ್ಶನವಾದರೆ, ’ಮಲೆನಾಡಿನ ಚಿತ್ರಗಳು’ ಕಿರುಹೊತ್ತಗೆಯಲ್ಲಿ ಆ ವಿಸ್ತಾರ ಬದುಕಿನ ಒಂದು ಕಿರುನೋಟವೇ ಅವರ ಮಹತ್ಕಾದಂಬರಿಗಳೊಂದಿಗೆ ಪ್ರವೇಶಿಸಲು ಸಹೃದಯನನ್ನು ಪ್ರೇರೇಪಿಸುತ್ತದೆ. ಅಂತೆಯೇ ಡಾ. ಜಿ.ಕೃಷ್ಣಪ್ಪನವರ ಒಂಬತ್ತು ಪಾತ್ರಗಳನ್ನು ಒಳಗೊಂಡ ’ ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ’ಯು ಮಹಾಕಾವ್ಯದ ಒಂದು ಇಣುಕು ನೋಟವನ್ನು ಓದುಗನಿಗೆ ನೀಡುತ್ತದೆ ಎಂದಿದ್ದಾರೆ.
©2024 Book Brahma Private Limited.