ಲೇಖಕ ಅಮೀಶ್ ತ್ರಿಪಾಠಿ ಅವರು ರಾಮಚಂದ್ರ ಸರಣಿ-2ರ ಅಡಿ ಬರೆದ ಕೃತಿ-ಮಿಥಿಲೆಯ ವೀರವನಿತೆ ಸೀತೆ. ಭಾರತೀಯ ಸನಾತನ ಧರ್ಮ, ಪುರಾಣ, ಮಹಾಕಾವ್ಯಗಳು ಓದುಗರಿಂದ ಮರೆಯಾಗಬಾರದು ಎಂಬ ಸದುದ್ದೇಶದೊಂದಿಗೆ ಲೇಖಕರು ಧಾರ್ಮಿಕ ಚಿಂತನೆಯ ಇಂತಹ ಕೃತಿಗಳನ್ನು ರಚಿಸುತ್ತಲೇ ಇದ್ದಾರೆ. ಮೂರು ಕೃತಿಗಳ ‘ಶಿವ ಸರಣಿ’(ಶಿವಾಸ್ ಟ್ರಯಾಲಜಿ)ಯಿಂದ ಪ್ರಸಿದ್ಧರಾದ ಲೇಖಕರು ಈಗ ರಾಮಚಂದ್ರ ಎಂಬ ಸರಣಿ ಆರಂಭಿಸಿ, ಅದರ 2ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಈ ಕೃತಿಯ ಮೂಲ ‘ಸೀತಾ: ವಾರಿಯರ್ ಆಫ್ ಮಿಥಿಲಾ’. ಮೃದು ಸ್ವಭಾವದ ಸೀತೆಯನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡಿರುವ ಭಾರತೀಯರಿಗೇ ಅಚ್ಚರಿಯೆನ್ನುವಂತೆ ‘ಸೇನಾನಿ’ ಸೀತೆಯನ್ನು ಪರಿಚಯಿಸಿದ್ದಾರೆ. ಸೀತೆಯ ಈ ಗುಣಗಳನ್ನು ಕಾಲ್ಪನಿಕವಾಗಿ ಸೃಷ್ಟಿಸದೇ ಪುರಾಣದ ಪುಸ್ತಕಗಳಿಂದಲೇ ಅಮೀಶ್ ಹೊರತೆಗೆದಿದ್ದಾರೆ ಎಂಬುದು ವಿಶೇಷ. ಹೀಗಾಗಿ, ಮಹಾಕಾವ್ಯಗಳ ಕಥೆ ಒಂದೇ ಆದರೂ, ಅವನ್ನು ನೋಡುವ ದೃಷ್ಟಿಕೋನದ ವಿಶೇಷತೆಯಿಂದ ಈ ಕೃತಿ ಗಮನ ಸೆಳೆಯುತ್ತದೆ.
©2024 Book Brahma Private Limited.