‘ವಚನ ದೀಪಿಕೆ’ ಕೃತಿಯು ಜಿ. ಕೃಷ್ಣಪ್ಪ ಅವರ ಶ್ರೀಕುವೆಂಪು ಸೃಜಿಸಿದ ಶ್ರೀರಾಮಾಯಣದರ್ಶನಂ ಆಧುನಿಕ ಸಾಹಿತ್ಯದ ಲೋಕೋತ್ತರ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮಲ್ಲೇಪುರಂ ಜಿ. ವೆಂಕಟೇಶ ಅವರು, ಈ ಮಹಾಕಾವ್ಯವು ಕನ್ನಡ ಜನಮಾನಸವನ್ನು ಅಪ್ಪಿಕೊಂಡದ್ದುಇದೀಗ ಇತಿಹಾಸವಾಗಿದೆ. ಈ ಮಹಾಕಾವ್ಯದ ಓದುವಿಕೆಯೇ ರಸಾನುಭೂತಿಯನ್ನು ಉಳ್ಳದ್ದು. ಈ ಮಹಾಕೃತಿಯ ಪ್ರವೇಶಕ್ಕೆ ಹಲವು ಗದ್ಯರೂಪೀ ಕೃತಿಗಳು ಈಗಾಗಲೇ ಹೊರಬಂದಿವೆ. ಪ್ರೊ. ದೇಜಗೌ ಅವರ ವಚನಚಂದ್ರಿಕೆಯು ಮೊದಲು ಪ್ರವೇಶ ಪಡೆಯಿತು. ಅನಂತರ ಕೆಲವು ಕೃತಿಗಳು ಹೊರಬಂದವು. ಡಾ. ಜಿ. ಕೃಷ್ಣಪ್ಪ ಅವರು ಬೇಂದ್ರೆ ಮತ್ತು ಕುವೆಂಪು ಅವರನ್ನು ತಮ್ಮ ಎರಡು ಕಣ್ಣುಗಳೆಂದು ಭಾವಿಸಿದ್ದಾರೆ. ಈಗಾಗಲೇ ಬೇಂದ್ರೆ ಕಾವ್ಯದ ಒಳಹೊಕ್ಕು ಹಲವು ಕೃತಿಗಳನ್ನು ತಂದು ರಸಿಕರ ಹಾಗೂ ಕಾವ್ಯಾಸ್ತಕರ ಕಣ್ಣನ್ನು ತೆರೆಸಿದ್ದಾರೆ. ಶ್ರೀಕುವೆಂಪು ಅವರನ್ನು ಕುರಿತು ಎರಡು-ಮೂರು ಕೃತಿಗಳು ಈಗಾಗಲೇ ಅವರಿಂದ ಬಂದಿವೆ. ಶ್ರೀಕುವೆಂಪು ಅವರ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ’ವಚನದೀಪಿಕೆ’ ಯನ್ನು ಕನ್ನಡ ಸಹೃದಯಲೋಕಕ್ಕೆ ಅವರು ಈಗ ಅರ್ಪಿಸುತ್ತಿದ್ದಾರೆ. ಡಾ. ಜಿ. ಕೃಷ್ಣಪ್ಪ ಅವರ ಮೂರು ಸಂವತ್ಸರಗಳ ನಿರಂತರ ಪರಿಶ್ರಮದ ಫಲವಾಗಿ ‘ಶ್ರೀರಾಮಾಯಣದರ್ಶನಂ’ ಕಾವ್ಯವು ಗದ್ಯರೂಪೀ ಮಹಾಕೃತಿಯಾಗಿ ಅವತರಣಗೊಂಡಿರುವುದು ಕನ್ನಡ ನಾಡಿನ ಭಾಗ್ಯವಿಶೇಷ. ಜಿ. ಕೃಷ್ಣಪ್ಪ ಅವರ ಸಾರಸ್ವತ ಹಾದಿಯಲ್ಲಿ ‘ಶ್ರೀರಾಮಾಯಣದರ್ಶನಂ ವಚನದೀಪಿಕೆ’ ಮೈಲಿಗಲ್ಲಾಗಿದೆ ಎಂದಿದ್ದಾರೆ.
©2024 Book Brahma Private Limited.