ಮಕ್ಕಳ ಮಹಾಕಾವ್ಯ. ಮೊಟ್ಟಮೊದಲಿಗೆ 614 ಪುಟಗಳಷ್ಟು ವ್ಯಾಪ್ತಿಯಲ್ಲಿ ಮಹಾಕಾವ್ಯ ಈಗ ಪ್ರಕಟವಾಗಿದೆ. ನೀಳ್ಗವಿತೆಗಳ ಕಡೆಗೇ ಹೆಚ್ಚು ಒಲವು ತೋರುವ ಡಾ.ಸಿ.ಎಂ.ಗೋವಿಂದರೆಡ್ಡಿ ಈಗ ಮಹಾಭಾರತದ ಕತೆಯನ್ನ ನಿಡಿದಾಗಿ ಮಕ್ಕಳಿಗಾಗಿಯೇ ಉದ್ದೇಶಿಸಿ ರಚಿಸಿದ್ದಾರೆ. ಬಹುಶಃ ಮಹಾಭಾರತದ ಯಾವ ಭಾಗವನ್ನೂ ಬಿಡದೆ ಎಲ್ಲವನ್ನೂ ಒಳಗೊಂಡಿರುವ ಕತೆ ಇಲ್ಲಿ ಕಾಣಸಿಗುತ್ತದೆ. ಸರಳ ಕನ್ನಡದಲ್ಲಿ ಸುಲಲಿತವಾಗಿ ಹರಿದುಹೋಗಿರುವ ಬರವಣಿಗೆ ಕತೆಯನ್ನ ವಿವರವಾಗಿ ಬಿಚ್ಚಿಡುತ್ತ ಹೋಗಿದೆ.
ಈ ಕಾವ್ಯದ ಭಾಷೆ ಈವತ್ತಿನ ಆಡುನುಡಿಗೆ ಹತ್ತಿರದ್ದು. ಹಾಗಾಗಿ ಇದು ಈವತ್ತಿನ ಕಥೆಯಾಗಿ ಭಾಷಿಕವಾಗಿಯೂ ತನ್ನನ್ನು ತೋರಿಸಿಕೊಳ್ಳುವುದು. ನಿಷ್ಠುರವಾದ ಜೀವನಪರ ನಿಲುವು ಕಥನದ ಉದ್ದಕ್ಕೂ ಕಂಡುಬರುವುದು. ಸನಾಜಮುಕತೆ, ಶೋಷಿತ ವರ್ಗದ ಪರವಾದ ನಿಲುವು ಭಾರತ ಕಥೆಗೆ ಒಂದು ಹೊಸ ಪರಿವೇಷ ವನ್ನೇ ನೀಡಿವೆ. ಕನ್ನಡದಲ್ಲಿ ಮಕ್ಕಳಿಗಾಗಿಯೇ ರಚಿತವಾದ ಮೊದಲ ದೀರ್ಘಕಾವ್ಯವಿದು! ಈ ಹೆಚ್ಚಳ ಕೃತಿಗೆ ತನ್ನಷ್ಟಕ್ಕೇ ಒಂದು ಮಹತ್ವವನ್ನು ದೊರಕಿಸಿಕೊಡುತ್ತದೆ. ಸಹಜ ಧರ್ಮದಲ್ಲಿ ಸಲೀಸಾಗಿ ಸಾಗುವ ಮನೋಹರವಾದ ಕಥನವು ಮಕ್ಕಳಿಗೆ ಮಾತ್ರವಲ್ಲ ಭಾರತ ಕಥೆಯಲ್ಲಿ ಆಸಕ್ತಿಯುಳ್ಳ ಹಿರಿಯರಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
©2024 Book Brahma Private Limited.