ಪಂಡಿತ ಕವಲಿ
(07 September 1900 - 18 January 1985)
ಚನ್ನಬಸಪ್ಪ ಕವಲಿ ಅವರು ಪಂಡಿತ ಕವಲಿ ಎಂದೇ ಖ್ಯಾತರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ 1900ರ ಸೆ. 07 ರಂದು ಜನಿಸಿದರು. ತಂದೆ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ. ಬ್ಯಾಡಗಿಯಲ್ಲಿ ಪ್ರಾರಂಭಿಕ ಶಿಕ್ಷಣ ನಂತರ ಮೈಸೂರಿಗೆ ತೆರಳಿ ಕನ್ನಡ-ಸಂಸ್ಕೃತದಲ್ಲಿ ವಿಶೇಷಾಧ್ಯಯನ ನಡೆಸಿದರು. ಕಾಳಿದಾಸ ಸಾಹಿತ್ನಯ ಕುರಿತು ಕೃತಿ ‘ಕಾಳಿದಾಸ: ಕ್ಷ-ಕಿರಣ’ ರಚಿಸಿದರು. ‘ವ್ಯಾಕರಣ ವಿವಿಧ ಸಾಹಿತ್ಯ’ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ, ಸಯ್ಯದ್ ಅಹಮದ್ ಖಾನ್ ಇತ್ಯಾದಿ ವ್ಯಕ್ತಿ ಚಿತ್ರಗಳು ಬರೆದರು. ಪುರಾಣ ಪುರುಷರ ಕಥೆಗಳು, ನೀತಿಕತೆಗಳು ರಚಿಸಿದರು. ಮಹಾಲಕ್ಷ್ಮೀ-ವಿಷ್ಣು ಪರಿಣಯದ ‘ಶ್ರೀಮತಿ ಪರಿಣಯ’, ‘ಮೆಂಟಲ್ ಹಾಸ್ಪಿಟಲ್-ನಾಟಕ, ಹುಟ್ಟುಹಬ್ಬ, ಸಮಾಜ ಸಾಮರಸ್ಯ ಹೀಗೆ ರೇಡಿಯೋ ನಾಟಕಗಳು, ಏಕಾಂಕ ...
READ MORE