ತತ್ವಜ್ಞಾನದ ಪರಿಕಲ್ಪನೆಗಳು

Author : ಕೆ. ಕೇಶವ ಶರ್ಮ

Pages 732

₹ 500.00




Year of Publication: 2014
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಗ್ರಹಿಸಿರುವ, ಅಧ್ಯಯನದ ಮಾರ್ಗವನ್ನು ಹಿಡಿಯಬಹುದಾದ ಸೂಕ್ಷ್ಮ ಅಂಶಗಳ ಮಾಹಿತಿಪೂರ್ಣ ಲೇಖನ ಸಂಗ್ರಹಗಳನ್ನು ’ತತ್ವಜ್ಞಾನದ ಪರಿಕಲ್ಪನೆಗಳು’ ಕೃತಿ ಒಳಗೊಂಡಿದೆ.

ಈ ಕೃತಿಯಲ್ಲಿ ಗಮನಿಸಬಹುದಾದ ಕೆಲವು ವಿಷಯಗಳೆಂದರೆ, ಪರಬ್ರಹ್ಮ/ಆತ್ಮಸಾಕ್ಷಾತ್ಕಾರ, ಪೂರ್ವ ಮಿಮಾಂಸೆ, ಪಂಚಭೂತ ವಿವೇಕ, ನಿರ್ವಿಕಲ್ಪದ ವಿವೇಕ, ನಿತ್ಯ – ಅನಿತ್ಯ, ನಿರ್ವಾಣ, ನಾಲ್ಕು ಬಗೆಯ ಸ್ಥೂಲ ಶರೀರ, ನೀರಿನ ಸೃಷ್ಟಿ, ನಿರ್ಗುಣ ಶಕ್ತಿ, ದರ್ಶನ ಮತ್ತು ಪದಾರ್ಥಗಳು, ತಾಂತ್ರಿಕ ದರ್ಶನ, ದುಃಖ ವಿರೋಧ ಮಾರ್ಗ, ದಾಸ ಮಾರ್ಗ, ಗೀತೋಪದೇಶ, ಗುರುವಿನ ಲಕ್ಷಣ, ಚರಕ ಸಂಹಿತಾ, ಚಿತ್ತ ಮತ್ತು ಧ್ಯಾನ, ಹಲವಾರು ವಿಷಯ ಪ್ರಸ್ತಾಪನೆಯನ್ನು ಲೇಖಕರಾದ ಕೇಶವ ಶರ್ಮರು ಈ ಕೃತಿಯಲ್ಲಿ ಮಾಡಿದ್ದಾರೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books