ಕೃಷಿ ವಿಜ್ಞಾನ ಕುರಿತಂತೆ ತಾಂತ್ರಿಕ ಪದಗಳ ಅರ್ಥವನ್ನು ವಿವರಿಸುವ ಪದಕೋಶ ಇದು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಜೆ. ಬಾಲಕೃಷ್ಣ ಕೃತಿಯನ್ನು ಹೊರತಂದಿದ್ದಾರೆ.
ಕೃತಿಯ ಪ್ರಸ್ತಾವನೆಯಲ್ಲಿ ಅವರು ಹೇಳಿರುವ ಮಾತು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪರಿಶ್ರಮವನ್ನು ಬಿಂಬಿಸುತ್ತದೆ: 'ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದು ಜನಸಾಮಾನ್ಯನಿಗೆ ತಲುಪುವುದು ಅವನ ಮಾತೃಭಾಷೆಯ ಮೂಲಕವೆ. ಹಾಗಾಗಿ ಇಂದು ವಿಜ್ಞಾನದ ಸಾಧನೆಗಳನ್ನು ಎಲ್ಲರಿಗೂ ಅರ್ಥವಾಗುವ ಸುಲಭ ಹಾಗೂ ಸರಳ ಶೈಲಿಯ ಮಾತೃ ಭಾಷೆಯಲ್ಲಿ ಪ್ರಚುರಪಡಿಸಬೇಕಾಗಿದೆ. ಇಂದು ರೈತನ ಜೀವನೋಪಾಯವಾಗಿರುವ ಆಧುನಿಕ ಕೃಷಿಗೂ ಸಹ ವಿಜ್ಞಾನವೇ ತಳಪಾಯವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸಂಶೋಧನೆಗಳು ಅಂತಿಮವಾಗಿ ರೈತನಿಗೆ ತಲುಪಿ, ಆತ ಅದನ್ನು ತನ್ನ ಹೊಲ, ಗದ್ದೆ, ತೋಟಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಕೃಷಿಯ ಸುಧಾರಣೆ ಕಾಣಬಹುದು. ಅದಕ್ಕಾಗಿ ಕೃಷಿವಿಜ್ಞಾನ ಸಾಹಿತ್ಯ ಕನ್ನಡದಲ್ಲಿ ಹೆಚ್ಚು ಪ್ರಮಾಣದಲ್ಲಿ ರಚಿತವಾಗಬೇಕಾಗಿದೆ. - ಈ ಉದ್ದೇಶದಿಂದಲೇ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ವಿಭಾಗ ಈಗಾಗಲೇ 300ಕ್ಕೂ ಹೆಚ್ಚು ಕೃಷಿವಿಜ್ಞಾನದ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿದೆ.'
©2024 Book Brahma Private Limited.