‘ಕನಕದಾಸರ ಕೀರ್ತನೆಗಳ ಶಬ್ಧ- ಪ್ರಯೋಗ ಕೋಶ’ ‘ಕೃತಿಯು ಶಬ್ದ ಪಯೋಗ ಕೋಶ ಕೃತಿಯಾಗಿದೆ. ಹಿರಿಯ ವಿದ್ವಾಂಸರಾದ ಶ್ರೀನಿವಾಸ ಹಾವನೂರು ಹಾಗೂ ವಿ.ಕೃಷ್ಣ ಅವರು ಸಂಪಾದಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ತಿಳಿಸಿರುವಂತೆ ‘ಶಬ್ದ ಪಯೋಗ ಕೋಶ’ ಎಂದರೆ ಗ್ರಂಥವೊಂದರಲ್ಲಿಯ ನಿರ್ದಿಷ್ಟ ಶಬ್ದಗಳನ್ನು, ಆ ಗ್ರಂಥದಲ್ಲಿ ಅವು ಕಾಣಿಸಿಕೊಂಡ ಪ್ರಯೋಗ ವಾಕ್ಯಗಳ ಸಹಿತವಾಗಿ, ಆಕಾರಾದಿ ಕ್ರಮದಲ್ಲಿ ಕೊಡುವುದು. ಬರೀ ಶಬ್ದಗಳನ್ನು ಮಾತ್ರ ಪಟ್ಟಿ ಮಾಡಿದರೆ ಅದು ಶಬ್ದಸೂಚಿ ಎನಿಸಿಕೊಳ್ಳುತ್ತದೆ. ಆದರೆ ಅದು ಪಯೋಗವಾದ ವಾಕ್ಯದ ಸಹಿತವಾಗಿ ಕೊಟ್ಟರೆ ಅದು ಶಬ್ದ - ಪಯೋಗ ಎನಿಸಿಕೊಳ್ಳುತ್ತದೆ. ಇಲ್ಲಿ ಬಂದಿರುವ ಶಬ್ದಗಳೊಂದೊಂದಕ್ಕೂ ವಿಶೇಷಾರ್ಥಗಳನ್ನೂ ವೈವಿಧ್ಯವನ್ನೂ ಕಲ್ಪಿಸಿ ಕನಕದಾಸರು ತಮ್ಮ ಕ ರ್ತೃತ್ವಶಕ್ತಿಯನ್ನು ಮೆರೆದಿದ್ದಾರೆ. "ಎನಿಸು" ಎನ್ನುವ ಸಾದಾ ಕ್ರಿಯಾಪದಕ್ಕೆ ಜೋಡಿಸಿದ ದೂರದ ಸಂದರ್ಭಗಳನ್ನೂ ಈ ದೃಷ್ಟಿಯಿಂದ ಗಮನಿಸುವುದು. ಅದರಂತೆ ’ಪಡು’ ಎಂಬುದು ಕ್ರಿಯಾಪದ ಹಾಗೇನೇ ‘ಅನ್ಯ’ ಎಂಬುದು ಬಳಕೆಯಲ್ಲಿ ತೀರ ಸಾಮಾನ್ಯವಾದ ಈ ಶಬ್ದ ಬಂದಲ್ಲಿ ಕನಕದಾಸರು ಪೌರಾಣಿಕ ಕಥಾನಕವನ್ನೂ ನೀತಿಯ ಮಾತುಗಳನ್ನು ತಂದಿದ್ದಾರೆ.
©2024 Book Brahma Private Limited.