ವೇದಾಂತ ಪ್ರವೇಶ ಬಯಸುವವರಿಗೆ ದಾರಿದೀವಿಗೆಯ ಹಾಗಿರುವ ಗ್ರಂಥ ’ಶಾಂಕರವೇದಾಂತ ನಿಘಂಟು’. ವೇದಾಂತ ಅಂದರೆ ವೇದದ ಪರಮಾರ್ಥ ಎಂದರ್ಥ. ಶಾಂಕರ ವೇದಾಂತಕ್ಕೆ ಶೃತಿಪ್ರಸ್ಥಾನವಾದ ಉಪನಿಷತ್ತು, ಸ್ಮೃತಿಪ್ರಸ್ಥಾನವಾದ ಭಗವದ್ಗೀತೆ ಮತ್ತು ಸೂತ್ರ ಅಥವಾ ನ್ಯಾಯಪ್ರಸ್ಥಾನವಾದ ಬ್ರಹ್ಮಸೂತ್ರಗಳು ಆಧಾರಸ್ಥಂಭಗಳು. ಆದಿಶಂಕರರು ಈ ಪ್ರಸ್ಥಾನತ್ರಯಗಳಿಗೆ ಭಾಷ್ಯ ಬರೆದಿದ್ದರು. ಈ ಭಾಷ್ಯದಲ್ಲಿನ ಬೋಧನೆ ಅರ್ಥವಾಗಬೇಕಾದರೆ ಅದರಲ್ಲಿ ಬಳಸಲಾದ ಪದಗಳ ಅರಿವು ಅಗತ್ಯ. ಅದನ್ನು ಮನಗಂಡ ಶ್ರೀಸಚ್ಚಿದಾನೇಂದ್ರಸರಸ್ವತಿಸ್ವಾಮಿಗಳು ಸಿದ್ಧಪಡಿಸಿದ ’ಪಾರಿಭಾಷಿಕ ಪದಕೋಶ’ ಇದು. ಆಧ್ಯಾತ್ಮ ಪ್ರಕಾಶ ಪತ್ರಿಕೆಯಲ್ಲಿ ಪ್ರಕಟಿಸಿದ್ದ 41ಲೇಖನಗಳನ್ನು ಬಳಸಿ ಈ ಪದಕೋಶ ಸಿದ್ಧಪಡಿಸಲಾಗಿದೆ.
©2024 Book Brahma Private Limited.