ಆಡಳಿತಕ್ಕೆ ಸಂಬಂಧಿಸಿದ ಪದವಿವರಣೆಯನ್ನು ಇಂಗ್ಲಿಷ್- ಕನ್ನಡ- ಹಿಂದಿ ಭಾಷೆಯಲ್ಲಿ ನೀಡುವ ಯತ್ನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ್ದು. ಆಡಳಿತಾತ್ಮಕ ಪದಕೋಶಗಳು ಯಾವಾಗಲೂ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹಾಗೂ ಅನ್ಯಭಾಷಿಕ ಅಧಿಕಾರಿಗಳಿಗೆ ಉಪಯುಕ್ತ. ಅಲ್ಲದೆ ಆಡಳಿತದ ವಿವಿಧ ಸ್ತರಗಳಲ್ಲಿ ಪದಗಳು ಅರ್ಥ ವ್ಯತ್ಯಾಸವಾಗುವುದನ್ನುಇಂತಹ ಕೃತಿಗಳು ತಡೆದು ಏಕರೂಪತೆಯನ್ನು ತಂದುಕೊಡುತ್ತವೆ.
ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜೆ. ಬಾಲಕೃಷ್ಣ ಪದಕೋಶವನ್ನು ಸಂಪಾದಿಸಿದ್ದಾರೆ. ಸಹ ಸಂಪಾದಕರು ಡಾ. ಜಿ. ವೀರಭದ್ರೇಗೌಡ.
©2025 Book Brahma Private Limited.