ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕರಣವೆಂಬುದು ಕಬ್ಬಿಣದ ಕಡಲೆ ಎಂಬ ಅಭಿಪ್ರಾಯವಿರುತ್ತದೆ. ಆದರೆ ಅದರ ಉಪಯೋಗ ಮತ್ತು ಪ್ರಾಮುಖ್ಯತೆ ಅವರಿಗೆ ಗೊತ್ತಿಲ್ಲದೇ ಇರದು. ಹಾಗಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸರಳವಾಗಿ ತತ್ಸಮ-ತದ್ಭವ ಸೇರಿದಂತೆ ವ್ಯಾಕರಣವನ್ನು ಅರ್ಥೈಸುವ ಸಲುವಾಗಿ ಹಿರಿಯ ಲೇಖಕ ಎಂ.ವಿ ನಾಗರಾಜರಾವ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಇಲ್ಲಿ ವಿರುದ್ಧಾರ್ಥಕ ಶಬ್ದಗಳು, ಶಬ್ದ ಸಮೂಹಗಳಿಗೆ ಒಂದೇ ಪದ, ಪರ್ಯಾಯವಾಚಕ ಶಬ್ದಗಳು, ಚಂಪೂ, ಶತಕ, ವಚನ ಮೊದಲಾದ ಪ್ರಮುಖ ಸಾಹಿತ್ಯ ರೂಪಗಳ ಕುರಿತಾಗಿಯೂ ವಿವರಿಸಲಾಗಿದೆ. ಜೊತೆಗೆ ಗಾದೆಗಳನ್ನು ಇಲ್ಲಿ ಸೇರಿಸಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಇದೊಂದು ಕಲಿಕೆಯ ಕೈಪಿಡಿ ಎನ್ನಬಹುದಾಗಿದೆ.
©2024 Book Brahma Private Limited.