ಕನ್ನಡ ಜಾನಪದ ನಿಘಂಟು- ವಿಸ್ತೃತ ನೆಲೆಯಲ್ಲಿ ಕನ್ನಡ ಜಾನಪದ ನಿಘಂಟನ್ನು ರೂಪಿಸುವ ಉದ್ದೇಶದಿಂದ ರಚನೆಯಾದ ಕೃತಿ ‘ಕನ್ನಡ ಜಾನಪದ ನಿಘಂಟು’. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ, ‘ಕನ್ನಡ ಜಾನಪದ ನಿಘಂಟು ಸಂಪುಟಗಳ ಪ್ರಕಟಣಾ ಕಾರ್ಯದ ಭಾಗವಾಗಿ, ಡಾ.ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದ ನಿಘಂಟನ್ನು ರಚಿಸಿದ್ದಾರೆ. ಭಾಷೆಯಲ್ಲಿನ ಧ್ವನಿವ್ಯತ್ಯಾಸ, ಅಕ್ಷರ ಪಲ್ಲಟ, ಪದಪ್ರಯೋಗಗಳ ಸ್ವರೂಪ, ಭಿನ್ನತೆ, ಉಪಯೋಗಿಸುವ ಪದಗಳಿಗೆ ಇರುವ ಪ್ರಾದೇಶಿಕ ಅರ್ಥವಿಸ್ತಾರ ಇತ್ಯಾದಿ ಅಂಶಗಳ ಕುರಿತು ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಸಂಧ್ಯಾರೆಡ್ಡಿಯವರು ಯಶಸ್ವಿಯಾಗಿದ್ದಾರೆ. ಸ್ವರಾಕ್ಷರ, ವರ್ಗೀಯ ವ್ಯಂಜನಗಳು ಹಾಗೂ ಅವರ್ಗೀಯ ವ್ಯಂಜನಗಳು ಎಂಬ ವಿಂಗಡಣೆಗೆ ಅನುಗುಣವಾಗಿ ಈಗಾಗಲೇ ಮೂರು ಸಂಪುಟಗಳು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಪ್ರಕಟವಾಗಿವೆ. ಇನ್ನೂ ವಿಸ್ತೃತ ನೆಲೆಯಲ್ಲಿ ಈ ಜಾನಪದ ನಿಘಂಟನ್ನು ರಚಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಡಾ. ಸಂಧ್ಯಾರೆಡ್ಡಿ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನೆಲಮೂಲ ಜ್ಞಾನ ಪರಂಪರೆಗಳ ಹಾಗೂ ಭಾಷಾಶಾಸ್ತ್ರೀಯ ನೆಲೆಯ ಅಧ್ಯಯನಗಳಿಗೆ ಪ್ರಸ್ತುತ ನಿಘಂಟು ಉತ್ತಮ ಆಕರ.
©2024 Book Brahma Private Limited.