ತಿಂಮ ರಸಾಯನ

Author : ಬೀchi

Pages 168

₹ 120.00




Year of Publication: 2017
Published by: ಬೀchi ಪ್ರಕಾಶನ
Address: ಬೀchi ಪ್ರಕಾಶನ, # ಇ ಬ್ಲಾಕ್ ಬಡವಾಣೆ, ಕೊಡಿಗೆಹಳ್ಳಿ ಗೇಟ್, ಸ್ವಾತಿ ಗಾರ್ಡನ್ ಹೋಟೆಲ್ ಹಿಂಭಾಗ, ಸಹಕಾರ ನಗರ ಬೆಂಗಳೂರು- 560092
Phone: 9844009383, 9916004649

Synopsys

ಬೀchiಯವರ ಹಾಸ್ಯ ಪದಕೋಶ ಇದು.  ಒಟ್ಟು ೧೬೦೦ ಪದಗಳಿಗೆ ಹಾಸ್ಯಮಯವಾಗಿ ಅರ್ಥ ಹುಡುಕುವ ಯತ್ನ ಇದು. ನಾ. ಕಸ್ತೂರಿ ಅವರ ಅನರ್ಥ ಕೋಶವನ್ನೇ ತುಸು ಹೋಲುತ್ತದೆ. ಅರ್ಥ ವಿವರಣೆಗಿಂತಲೂ ಅದು ಹುಟ್ಟಿಸುವ ಧ್ವನ್ಯಾರ್ಥ ಬೀchi ಅವರ ಅನನ್ಯತೆಗೆ ಸಾಕ್ಷಿ. ಉದಾಹರಣೆಗೆ: ಪತ್ನಿ- ಪೂತ್ನಿ; ದಪ್ಪ ಹೊಟ್ಟೆಯವ- ಭೂಗೋಳಪ್ಪ; ಊದುಬತ್ತಿ- ದೇವರ ಬೀದಿ ಇತ್ಯಾದಿ.

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books