ಡಯಸ್ಪೊರಾ ಪಾರಿಭಾಷಿಕ ಪದಗಳ ವ್ಯಾಪ್ತಿಯನ್ನು ವಿವರಿಸುವ ಕೃತಿ. ಡಯಸ್ಪೊರಾ ಎಂಬುದು ಮೂಲತಃ ವಲಸೆ ಎನ್ನುವುದರ ಅರ್ಥವನ್ನು ಹೊಂದಿರುವ ಒಂದು ಪರಿಕಲ್ಪನೆಯಾಗಿದ್ದು, ಜಾಗತಿಕವಾಗಿ ನಡೆಯುವ ವಲಸಿಗರ ಮೂಲ ಮತ್ತು ವಲಸಿಗರಾಗಿ ನಾನಾ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡು ಬದುಕುತ್ತಿರುವವರ ಜೀವನ, ಸಂಸ್ಕೃತಿ ಹಾಗೂ ಮನೋಭಾವಗಳನ್ನು ವಿಶ್ಲೇಷಿಸುವಂತದ್ದು. ಡಯಾಸ್ಪೊರಾದ ಪರಿಕಲ್ಪನೆ, ಅರ್ಥ, ಚರಿತ್ರೆ, ಅದರ ಸ್ವರೂಪ, ವರ್ಗೀಕರಣ, ಡಯಾಸ್ಪೊರಾದ ವರ್ತಮಾನ, ಡಯಾಸ್ಪೊರಾ ಸಾಹಿತ್ಯ ಹೀಗೆ ವಿವಿಧ ದರಷ್ಟಿಕೋನಗಳಿಂದ ನಿರ್ವಚಿಸಿರುವ ಈ ಕೃತಿಯು ಡಯಾಸ್ಪೊರಾದ ಸಾಧ್ಯತೆಗಳ ಮತ್ತು ಅದರ ವಿಸ್ತಾರದ ಬಗೆಗಿನ ಬರಹವಾಗಿದೆ.
©2025 Book Brahma Private Limited.