ಲೇಖಕ ಡಾ. ಲಿಂಗದಹಳ್ಳಿ ಹಾಲಪ್ಪ ಅವರ ಕೃತಿ- ಹಾಲುಮತ ಸಾಂಸ್ಕೃತಿಕ ಪದಕೋಶ. ಹಾಲುಮತ ಸಮಾಜದ ಸಂಪ್ರದಾಯ, ನಂಬಿಕೆ, ಆಚರಣೆ, ಕಲೆ, ವೃತ್ತಿ, ಆರಾಧನೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ 1450 ಪಾರಿಭಾಷಿಕ ಪದಗಳ ವಿವರಗಳು ಈ ಸಂಪುಟದಲ್ಲಿವೆ. ಸಂಶೋಧಕರು ಅನೇಕ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿದ್ದು, ವ್ಯಾಪಕ ಕ್ಷೇತ್ರ ಕಾರ್ಯದ ಮೂಲಕ ಆಚರಣೆ, ಸಂಪ್ರದಾಯ ಕಲೆಗಳನ್ನು ನೋಡಿದ್ದು, ಅದರಿಂದ ವ್ಯವಸ್ಥಿತವಾಗಿ ಮಾಹಿತಿಗಳನ್ನು ಕಲೆಹಾಕಿ, ವಿಶ್ಲೇಷಣೆಗೆ ಒಳಪಡಿಸಿದ್ದು, ವಿಶೇಷವಾಗಿ ಇಲ್ಲಿನ ಶಬ್ದಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ವಿವರಿಸಿದ್ದು, -ಈ ಸಂಪುಟದ ವಿಶಿಷ್ಟತೆಯಾಗಿದೆ. ಹಾಲುಮತ ಸಮಾಜದ ಸಮಗ್ರವಾದ ಸಾಂಸ್ಕೃತಿಕ ಚಹರೆಗಳನ್ನು ತಿಳಿದುಕೊಳ್ಳುವಲ್ಲಿ ಈ ಸಂಪುಟವು ಬಹುಮುಖ್ಯ ಆಕರಗ್ರಂಥವಾಗಿ ಸಹಕಾರಿಯಾಗುತ್ತದೆ’ ಎಂದು ಕೃತಿಯ ಬೆನ್ನುಡಿಯಲ್ಲಿ ಕಾಣಿಸಲಾಗಿದೆ.
©2024 Book Brahma Private Limited.