ಜಾನಪದರು ಬಳಸಿದ ವಸ್ತುಗಳಲ್ಲಿ ಎಷ್ಟೊಂದು ವಿಧಗಳಿವೆ. ಉದಾಹರಣೆಗೆ ಗುಬ್ಬಿ ಎನ್ನುವ ಪದಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳು ಮೂಡಿ ಬರುತ್ತಿರುತ್ತವೆ. ಅಥವಾ ಬೊಂಡ ಎನ್ನುವ ವಸ್ತು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಅರ್ಥ ಹೊಂದಿರಬಹುದು. ಅಂತಹ ವಸ್ತುಗಳನ್ನೇ ಧ್ಯಾನಿಸಿ ರಚನೆಯಾದ ವಿಶಿಷ್ಟ ಪದಕೋಶ ಇದು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿದ್ವಾಂಸ ಡಾ. ಸ.ಚಿ. ರಮೇಶ್ ಅವರ ಕೃತಿ ಇದು. ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೃತಿಯನ್ನು ಹೊರತಂದಿದೆ.
©2025 Book Brahma Private Limited.