ಬೇಂದ್ರೆಯವರ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ, ಪ್ರತೀಕ ಸಂಯೋಜನೆ ಮತ್ತು ಅಲಂಕಾರ ವೈಭವ ತಿಳಿಯುವ ದೃಷ್ಟಿಯಿಂದ ಸಿದ್ಧಪಡಿಸಲಾದ ಕೃತಿಯಿದು. ಸುದೀರ್ಘ ಮೂವತ್ತೆರಡು ಪುಟಗಳ ಮುನ್ನುಡಿಯು ಈ ಕೋಶದ ಮಹತ್ವವನ್ನು ವಿವರಿಸುತ್ತದೆ.
ಪ್ರತಿಮೆ ಕಣ್ಣಿಗೆ, ಕಿವಿಗೆ ಪಂಚೇಂದ್ರಿಯ ಜ್ಞಾನಗಳಿಗೆ ದಕ್ಕುವಂತಹದ್ದು. ಪ್ರತಿಮೆ ಮನಸ್ಸಿಗೆ ಆಹ್ಲಾದ ನೀಡಿದರೆ ಪ್ರತೀಕ ಬುದ್ಧಿಗೆ ತೃಪ್ತಿ ಕೊಡುತ್ತದೆ. ಪ್ರತಿಮೆ-ಪ್ರತೀಕಗಳು ಕಾವ್ಯದ ಅಂತರಂಗದ ಸೊತ್ತಾದರೆ ಅರ್ಥಾಲಂಕಾರಗಳು ಬಾಹ್ಯದ ಸೊತ್ತು. ಬೇಂದ್ರೆಯವರ ಕಾವ್ಯ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆದ ವಿಶಿಷ್ಟ ಪ್ರಯತ್ನ.
©2024 Book Brahma Private Limited.