ಕಂಪ್ಯೂಟರ್ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚು ಇಂಗ್ಲಿಷ್ ಪದಗಳ ಕನ್ನಡ ವಿವರಣೆ ಕೃತಿಯಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನುಡಿಕೋಶವನ್ನು ಪ್ರಕಟಿಸಿದೆ. ಒಂದೊಂದು ಪದದ ಬಗ್ಗೆಯೂ ಪ್ಯಾರಾಗಟ್ಟಲೆ ಮಾಹಿತಿ ನೀಡಲಾಗಿದೆ. ಹಾಗಾಗಿ ಇದನ್ನು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಟ್ಟ ವಿಶ್ವಕೋಶ ಎಂದೂ ಕರೆಯಬಹುದು.
ತಂತ್ರಜ್ಞಾನದ ಬಗ್ಗೆ ಅಪಾರ ಕೆಲಸ ಮಾಡಿರುವ ಟಿ.ಜಿ. ಶ್ರೀನಿಧಿ ಕೃತಿಯ ಲೇಖಕರು. ನಾಗೇಶ ಹೆಗಡೆ, ಜಗನ್ನಾಥ ಪ್ರಕಾಶ್ ಅವರಂತಹ ಹಿರಿಯರು ಪದಕೋಶದ ಸಂಪಾದಕೀಯ ಮಂಡಳಿಯಲ್ಲಿದ್ದಾರೆ.
©2025 Book Brahma Private Limited.