ಡಾ. ಪೊತ್ತೂರಿ ವೆಂಕಟೇಶ್ವರ ರಾವ್ ಅವರ ತೆಲುಗು ಮೂಲದ ಈ ಕೃತಿಯನ್ನು ಲೇಖಕ ಡಾ. ಆರ್. ಶೇಷಶಾಸ್ತ್ರಿ ಹಾಗೂ ಬಿ.ಎನ್. ಶ್ರೀನಿವಾಸ ಅವರು ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ ಕೃತಿ-ಪಾರಮಾರ್ಥಿಕ ಪದಕೋಶ. ಸಾಮಾನ್ಯ ನಿಘಂಟುಗಳನ್ನು ರಚಿಸುವುದು ಹಿಂದಿನಿಂದಲೂ ಇದೆ. ಆದರೆ, ಜ್ಞಾನಕೋಶಗಳು ವಿಸ್ತಾರವಾದಂತೆ ಆಯಾ ವಿಷಯಕ್ಕೆ ಸಂಬಂಧಿಸಿ ಪದಕೋಶಗಳು ಬರಲು ಆರಂಭಿಸಿದ್ದು, ಈಗ ಪ್ರತಿ ಕ್ಷೇತ್ರವೂ ಒಂದೊಂದು ವಿಶೇಷ ಕ್ಷೇತ್ರವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ, ಆಯಾ ವಿಷಯಗಳ ಪದಕೋಶ ರಚನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಧ್ಯಾತ್ಮವೂ ಒಂದು ಆಸಕ್ತಿಕರ ಜ್ಞಾನ ಶಾಖೆ. ಅದಕ್ಕೆ ಸಂಬಂಧಿಸಿದ ಪದಕೋಶವು ಈ ಕೃತಿ. ಕನ್ನಡದಲ್ಲಿಯಂತೂ ಇಂತಹ ಕೃತಿಯ ಕೊರತೆಯನ್ನು ನೀಗಿಸಿದೆ.
©2025 Book Brahma Private Limited.