ಅಮರಸಿಂಹನ ಅಮರಕೋಶಕ್ಕೊಂದು ನಿಘಂಟು

Author : ಕ.ನಂ. ಪ್ರಸನ್ನ

Pages 400

₹ 325.00




Year of Publication: 2014
Published by: ಐ ಬಿ ಎಚ್ ಪ್ರಕಾಶನ
Address: # 18/1, 1ನೇ ಮಹಡಿ, 2ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಬೆಂಗಳೂರು-560019
Phone: 0802667 6003

Synopsys

‘ಅಮರಸಿಂಹನ ಅಮರಕೋಶಕ್ಕೊಂದು ನಿಘಂಟು’ ಎಂಬುದು ಹಿರಿಯ ಲೇಖಕ ಕ.ನಂ. ಪ್ರಸನ್ನ ಅವರು ಸಂಪಾದಿಸಿದ ಬೃಹತ್ ಕೃತಿ. ಇದೊಂದು ವಿಭಿನ್ನ ನಿಘಂಟು ಎಂದೇ ಉಪಶೀರ್ಷಿಕೆ ಹೇಳುತ್ತದೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಅದ್ವೈತ ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ ಶಂಕರಾಚಾರ್ಯರು ಅಮರಸಿಂಹನನ್ನು ಭೆಟ್ಟಿಯಾಗ ಬಯಸುತ್ತಾನೆ. ಆಗ, ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು, ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರಾಚಾರ್ಯರು ಅವನ ಮನೆಗೆ ಧಾವಿಸಿದರು. ಆದರೆ, ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು. ಈ ಸಂಗತಿಯನ್ನು ಶಂಕರದಿಗ್ವಿಜಯ ದಲ್ಲಿ ಹೇಳಲಾಗಿದೆ. ಅಮರಕೋಶವು ಸಂಸ್ಕೃತ ಭಾಷೆಯಲ್ಲಿ ರಚಿಸಿದ ನಾಮಲಿಂಗಾನುಶಾಸನ ಎಂಬ ಸಮಾನಾರ್ಥಕ ಪದಕೋಶ. ನಾಮಲಿಂಗಾನುಶಾಸನ ಕೃತಿಯನ್ನು ಅವನ ಗೌರವಾರ್ಥ ಅಮರಕೋಶ ಎಂದು ಕರೆಯುತ್ತಾರೆ. ಈ ಕೃತಿಯು `ಅಮರಾನಿರ್ಜರಾದೇವಾಃ' ಎಂದು ಅರಂಭವಾಗುವುದರಿಂದ ಅಮರಕೋಶ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತಿದೆ. ನಾಮಲಿಂಗಾನುಶಾಸನ ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ. ಅಮರಸಿಂಹನು ಕ್ರಿ.ಶ. 400 ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. 7ನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ, ಆಸಕ್ತಿಕರ ಇಂತಹ ವಿವರಗಳನ್ನು ಒಳಗೊಂಡ ಕೃತಿ ಇದು. .

About the Author

ಕ.ನಂ. ಪ್ರಸನ್ನ

ಕ.ನಂ. ಪ್ರಸನ್ನ ಅವರು ಹಿರಿಯ ಲೇಖಕರು ಕೃತಿಗಳು: ಕನ್ನಡ ವ್ಯಾಕರಣ ಪದಕೋಶ (ಅಲಂಕಾರ ಮತ್ತು ಛಂದಸ್ಸು ಸಹಿತ), ಅಮರಸಿಂಹನ ಅಮರಕೋಶಕ್ಕೊಂದು ನಿಘಂಟು ...

READ MORE

Related Books