ಶಿವರಾಮ ಕಾರಂತರ ಕೃತಿ-ಸಿರಿಗನ್ನಡ ಅರ್ಥಕೋಶ. ಕನ್ನಡ-ಕನ್ನಡ ನಿಘಂಟುವಿನ ಕೊರತೆ ಇದ್ದ ಕಾಲದಲ್ಲಿ ಶಿವರಾಮ ಕಾರಂತರು ಇಂತಹ ಪ್ರಯತ್ನಕ್ಕೆ ಇಳಿದಿದ್ದು, ವಿದ್ಯಾರ್ಥಿ-ಬೋಧಕರಿಗೆ ತೊಂದರೆಯಾಗಬಾರದು ಎಂಬ ಕಳಕಳಿಯಿಂದ ಕೆಲಸ ಮಾಡಿದ್ದು ಸ್ಪಷ್ಟವಿದೆ.
ತಮ್ಮ ನಿರಂತರ ಅನ್ವೇಷಣೆಯಿಂದ ಸೃಜನಶೀಲ ಸಾಹಿತ್ಯ, ವಿಚಾರ ಸಾಹಿತ್ಯಗಳೆರಡರಲ್ಲೂ ಪಾಂಡಿತ್ಯ ಸಾಧಿಸಿದ ಶಿವರಾಮ ಕಾರಂತರು ಸಂಪಾದಿಸಿದ ಈ ಅರ್ಥಕೋಶದಲ್ಲಿ ಸುಮಾರು 25 ಸಾವಿರ ಕನ್ನಡ ಶಬ್ಧಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ಇದೆ. ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಶಬ್ದಗಳು ಇಲ್ಲಿವೆ. ಪ್ರಾಚೀನ ಸಾಹಿತ್ಯ ಕೃತಿಗಳ ಅಧ್ಯಯನಕ್ಕೂ ಈ ನಿಘಂಟು ಉತ್ತಮ ಮಾರ್ಗದರ್ಶನ ನೀಡುವಂತಿದೆ. ಪುರಾಣ, ಕಾಲ್ಪನಿಕ, ವೈದಿಕ ಶಬ್ದಗಳಿಗೂ ಅರ್ಥಗಳನ್ನು ನೀಡಲಾಗಿದೆ. ಹೊಸಗನ್ನಡ-ಹಳಗನ್ನಡದ ವಿದ್ಯಾರ್ಥಿಗಳಿಗೂ ಸಹಾಯಕವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರೇ 1941ರಲ್ಲಿ (ಪುಟ: 560) ಈ ನಿಘಂಟುವನ್ನು ಪ್ರಕಟಿಸಿದ್ದರು. ಬೆಂಗಳೂರಿನ ಎಸ್ ಬಿಎಸ್ ಪ್ರಕಾಶನವು 1990ರಲ್ಲಿ ನಾಲ್ಕನೇ ಆವೃತ್ತಿಯಾಗಿ ಈ ನಿಘಂಟುವನ್ನು ಪ್ರಕಟಿಸಿತ್ತು.
©2024 Book Brahma Private Limited.