‘ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು’ ಹಿರಿಯ ಲೇಖಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಕೃತಿ. ಕಲಬುರಗಿಯ ಪಾಲಿ ಇನ್‍ಸ್ಟಿಟ್ಯೂಟ್ ಈ ಮಹತ್ವದ ಕೃತಿಯನ್ನು ಪ್ರಕಟಸಿದೆ. ‘ಪ್ರಸ್ತುತ ನಿಘಂಟು ತ್ರಿಪಿಟಕಗಳ ಸಾಮಾನ್ಯ ಪರಿಚಯವನ್ನು ಮಾಡಿಕೊಡುತ್ತದೆ. ನಾನು ತಿಳಿದಂತೆ ಭಾರತೀಯ ಪ್ರಾಂತ್ಯಭಾಷೆಗಳಲ್ಲಿ ಮೊದಲಬಾರಿಗೆ ರಚಿತಗೊಂಡಿರುವ ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು ಇದಾಗಿದೆ’ ಎನ್ನುತ್ತಾರೆ ಸಂಪಾದಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ.
‘ಕನ್ನಡವು ಮೊದಮೊದಲು ಸಂಸ್ಕೃತವನ್ನು ತನ್ನದಾಗಿಸಿಕೊಂಡಿತು. ಆನಂತರ ಪ್ರಾಕೃತ ಬಂದು ಸೇರಿಕೊಂಡಿತು. ಮಧ್ಯಕಾಲೀನದ ಹೊತ್ತಿನಲ್ಲಿ ಅನ್ಯದೇಶಿಯ ಭಾಷೆಗಳು ಕನ್ನಡನುಡಿಯ ಜತೆಗೆ ಆಪ್ತತೆಯನ್ನು ಬೆಳೆಸಿಕೊಂಡಿತು. ದಕ್ಷಿಣಭಾರತೀಯ ಭಾಷೆಗಳ ಜತೆ ಆದಾನ-ಪ್ರದಾನ ಮಾಡಿಕೊಂಡಿತು. ಆಧುನಿಕ ಕರ್ನಾಟಕದ ಕಾಲಕ್ಕೆ ವಿಫುಲವಾಗಿ ಇಂಗ್ಲಿಷ್ ಭಾಷೆಯನ್ನು ತನ್ನ ಜಾಯಮಾನಕ್ಕೆ ಅನುಗುಣವಾಗಿ ಸ್ವಾಗತಿಸಿತು. ಆದರೆ, ಕನ್ನಡವು ಜೀರ್ಣಾಗ್ನಿಭಾಷೆಯಾಗಿಯೇ ಉಳಿಯಿತು. ಕನ್ನಡ ನುಡಿಯಲ್ಲಿ ನೂರಾರು ಪ್ರಾಕೃತ-ಪಾಲಿಭಾಷೆಗಳಿಂದ ಶಬ್ದಗಳು ಬಂದು ಸೇರಿಕೊಂಡಿವೆ. ಅವುಗಳ ಅಧ್ಯಯನಕ್ಕೆ ವಿದ್ವಾಂಸರು ತೊಡಗಬೇಕಾಗಿದೆ. ಪ್ರಸ್ತುತ ಸಂಕ್ಷಿಪ್ತ ನಿಘಂಟು, ಭಾಷೆಯ ಸುತ್ತಮುತ್ತಣ ಚರಿತ್ರೆಯನ್ನು ತಿಳಿಯಲು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ನೆರವಾಗುತ್ತದೆಂದು ನಾನು ನಂಬಿದ್ದೇನೆ’ ಎಂಬುದು ಮಲ್ಲೇಪುರಂ ಜಿ. ವೆಂಕಟೇಶ ಅವರ ಅಭಿಪ್ರಾಯವಾಗಿದೆ.
ಸಂಸ್ಕೃತ ಭಾಷಾಭ್ಯಾಸಿಗಳು ಹಾಗೂ ತುಲನಾತ್ಮಕ ಭಾಷಾಭ್ಯಾಸಿಗಳಿಗೂ ಈ ನಿಘಂಟು ಪ್ರಯೋಜನವಾಗಲಿದೆ.
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು’ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮ.
©2025 Book Brahma Private Limited.