ಸಸ್ಯಶಾಸ್ತ್ರ ಮನುಕುಲದ ಒಂದು ಜ್ಞಾನಶಾಖೆ. ಒಂದೇ ಸಸ್ಯಕ್ಕೆ ಕನ್ನಡ, ಇಂಗ್ಲಿಷ್, ವೈಜ್ಞಾನಿಕ ಹಾಗೂ ಕೌಟುಂಬಿಕ ಹೆಸರುಗಳು ಭಿನ್ನವಾಗಿರುತ್ತವೆ. ಕೆಲವು ಭಾಷೆಗಳಲ್ಲಿ ಕೆಲವು ಪದಾರ್ಥಗಳಿಗೆ ಹೆಸರು ಇರುವುದಿಲ್ಲ.ಇನ್ನೂ ಕೆಲವು ಬಾರಿ ಸ್ಥಳೀಯ ಹೆಸರು ಗೊತ್ತಿದ್ದರೂ ವೈಜ್ಞಾನಿಕ ಹೆಸರು ತಿಳಿದಿರುವುದಿಲ್ಲ. ವೈಜ್ಞಾನಿಕ ಹೆಸರು ತಿಳಿದಿದ್ದರೂ ಕೌಟುಂಬಿಕ ಹೆಸರುಗಳ ಬಗ್ಗೆ ಗೊಂದಲ ಮೂಡುತ್ತಿರುತ್ತದೆ. ಅಂತಹ ಸಮಸ್ಯೆಗಳನ್ನು ಪರಿಹರಿಸಲು ಎಸ್.ಜಿ. ನರಸಿಂಹಾಚಾರ್ ಮತ್ತು ಡಾ. ಎ.ಎನ್. ಶೃಂಗೇಶ್ವರ ಪ್ರಸ್ತುತ ನಿಘಂಟನ್ನು ಪ್ರಕಟಿಸಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಕೃತಿಯನ್ನು ಹೊರತಂದಿದೆ.
©2025 Book Brahma Private Limited.