ಮಲೆನಾಡಿನ ಸಂಸ್ಕೃತಿಯನ್ನು ಅನನ್ಯ ಬಗೆಯಲ್ಲಿ ಕಟ್ಟಿಕೊಡುವ ಪದಕೋಶ ಇದು. ಮಲೆನಾಡಿನಲ್ಲಿ ಬಳಸುವ ಪದಗಳನ್ನೇ ಆಯ್ಕೆ ಮಾಡಿ ಅದರ ಅರ್ಥವಿವರಣೆ ನೀಡಲಾಗಿದೆ. ಜಾನಪದ ವಿಶ್ವವಿದ್ಯಾಲಯ ಪ್ರಕಟಿಸಿರುವ ಕೃತಿಗೆ ತನ್ನದೇ ಆದ ಮಹತ್ವ ಕೂಡ ಇದೆ. ಇಂತಹ ನಿಘಂಟುಗಳು ’ಹಲವು ಕನ್ನಡ’ಗಳನ್ನು ಬೆಳೆಸುವಲ್ಲಿ ಉಪಯುಕ್ತ.
ಉದಾಹರಣೆಗೆ ಹಾವುರಾಣಿಗೆ ಮಲೆನಾಡಿನಲ್ಲಿ ಅಣಲೆ ಎನ್ನುತ್ತಾರೆ. ಹಬ್ಬದೂಟ ಎನ್ನುವುದಕ್ಕೆ ’ಔಂತ್ಲ’ ಎನ್ನಲಾಗುತ್ತದೆ. ಬೇಟೆಯವರು ಮದ್ದುಗುಂಡುಗಳನ್ನು ತುಂಬಿಡುತ್ತಿದ್ದ ಜೋಳಿಗೆಗೆ ’ಮಸಿಚೀಲ’ ಎಂಬರ್ಥವಿದೆ. ಅಪ್ಪಟ ಮಲೆನಾಡಿನ ಸ್ಪರ್ಶವಿರುವ ಇಂತಹ ಸಾವಿರಾರು ಪದಗಳಿಗೆ ಅರ್ಥವನ್ನು ಹುಡುಕಲು ಕೃತಿಯನ್ನು ಓದಲೇಬೇಕು.
©2024 Book Brahma Private Limited.