ಬೀದರ ಕನ್ನಡ ಕೋಶ

Author : ದೇಶಾಂಶ ಹುಡಗಿ

Pages 400

₹ 400.00




Year of Publication: 2010
Published by: ಶಂಭುಲಿಂಗ ವಾಲದೊಡ್ಡಿ
Address: ಶಂಭುಲಿಂಗ ವಾಲದೊಡ್ಡಿ ವಾಲದೊಡ್ಡಿ ಗ್ರಾಮ , ಬೀದರ ಜಿಲ್ಲೆ-585401
Phone: 9341056006

Synopsys

ದೇಶಾಂಶ ಹುಡಗಿಯವರಿಗೆ ಈ ಕೋಶ ರಚನೆಗೆ ಆದರ್ಶವಾದುದು ರೆ. ಎಫ್. ಕಿಟ್ಟೆಲ್ಲರು ಪ್ರಕಟಿಸಿದ ಕನ್ನಡ-ಇಂಗ್ಲಿಷ್ ನಿಘಂಟು. ’ಬೀದರ ಕನ್ನಡ ಕೋಶ’ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಳಕೆಯಲ್ಲಿರುವ  ಪದಗಳ ಅರ್ಥಕೋಶ. ’ಬಿದರಿ ಕನ್ನಡ ನುಡಿಯು ಗುಂಡು ಸಿಡಿದಂತೆ, ಒಮ್ಮೊಮ್ಮೆ ಜುಳು ಜುಳನೆ ಜಲವು ಹರಿದಂತೆ’ ಎಂದು ಲೇಖಕರೇ ಈ ಪ್ರಾದೇಶಿಕ ಭಾಷೆಯ ವೈಶಿಷ್ಟ್ಯವನ್ನು ಹೆಚ್ಚಿಸಿದ್ದಾರೆ.  ಒಂದು ಪದಕೋಶ ಸಾಧ್ಯವಾದಷ್ಟು ಪ್ರಾದೇಶಿಕ ಸಂಸ್ಕೃತಿಯ ಪಳೆಯುಳಿಕೆಗಳನ್ನು ಹಿಡಿದಿಡಿಯಬೇಕೆನ್ನುವ ಪ್ರಾಮಾಣಿಕ ಕಳಕಳಿ ಕೋಶದ ಶಾಸ್ತ್ರೀಯತೆ ಹಾಗೂ ವೈಜ್ಞಾನಿಕ ಮಹತ್ವವನ್ನು ತಿಳಿಯಪಡಿಸುತ್ತದೆ. 

About the Author

ದೇಶಾಂಶ ಹುಡಗಿ
(06 November 1936)

ಸಾಹಿತ್ಯ , ಶಿಕ್ಷಣ, ರಂಗಭೂಮಿ, ಸಂಗೀತ ಮತ್ತು ಪರಿಸರ ಕ್ಷೇತ್ರಗಳಲ್ಲಿ ತಮ್ಮದೇ ಕಾಣ್ಕೆ ನೀಡಿರುವ ವಿಶಿಷ್ಟ ಪ್ರತಿಭೆ ದೇಶಾಂಶ ಹುಡಗಿ. ಶಿಕ್ಷಕ, ಲೇಖಕ, ರಂಗಕಲಾವಿದ, ನಿರ್ದೇಶಕ, ಅನುವಾದಕ, ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ. ದೇಶಾಂಶ ಹುಡಗಿ ಕಾವ್ಯನಾಮದ ಶಾಂಪಪ್ಪ ಶರಣಪ್ಪ ದೇವರಾಯ ಅವರು ಗಡಿನಾಡಿನ ಪ್ರತಿಭೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ ಹುಟ್ಟೂರು.1936 ನವೆಂಬರ್ 6 ರಂದು ಜನಿಸಿದ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ, ಚಿಟಗುಪ್ಪದಲ್ಲಿ ಮಾಧ್ಯಮಿಕ, ಗುಲ್ಬರ್ಗಾದ ಸರ್ಕಾರಿ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಹೈದರಾಬಾದ್ ನ ವಿವೇಕವರ್ಧಿನಿ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ. ಬಾಹ್ಯ ವಿದ್ಯಾರ್ಥಿಯಾಗಿ ಮಧ್ಯಪ್ರದೇಶ ಇಂಟರ್ ಮೀಡಿಯೇಟ್, ...

READ MORE

Related Books