ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ-ಲೇಖಕ ಚಿ.ಸಿ. ನಿಂಗಣ್ಣ ಅವರ ಸಂಪಾದಿತ ಕೃತಿ. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ತಿಳಿಯಲು ಸರಳವಾಗಿಸುವ ಉದ್ದೇಶ ಈ ಕೃತಿಯ ಹಿಂದಿದೆ. ಪ್ರತಿ ವಿಷಯದ ಅಧ್ಯಯನಶೀಲತೆಯನ್ನು ಕೋಶದ ಒಟ್ಟು ಅಂದದಲ್ಲಿ ಕಾಣಬಹುದು.ಈ ಕೃತಿಯು ಮೊದಲು ಮುದ್ರಣ ಗೊಂಡಿದ್ದು-2008ರಲ್ಲಿ. ಈಗ 4 ನೇ ಮುದ್ರಣ ಕಂಡಿದೆ. ಒಟ್ಟು 13 ಅಧ್ಯಾಯಗಳಿವೆ.
ಈ ಸಂಪಾದಿತ ಗ್ರಂಥವು ಕನ್ನಡ ಸಾಹಿತ್ಯದ ಪೂರ್ವದ ಹಳೆಗನ್ನಡ, ನಡುಗನ್ನಡ, ಹರಿದಾಸರ ಸಾಹಿತ್ಯ, ಹೊಸಗನ್ನಡ, ಕನ್ನಡಭಾಷೆ ಮತ್ತು ವ್ಯಾಕರಣ, ತೌಲನಿಕ ಕಾವ್ಯವೀಮಾಂಸೆ, ಅಲಂಕಾರಪರಿಚಯ, ಸಾಹಿತ್ಯವಿಮರ್ಶೆ, ಛಂದಃಶಾಸ್ತ್ರ, ಶಾಸನ ಅಧ್ಯಯನ ಮತ್ತು ಕನ್ನಡ ಸಂಸ್ಕøತಿ ಇತಿಹಾಸ, ಗ್ರಂಥ ಸಂಪಾದನೆ ಹಾಗೂ ಹಸ್ತಪ್ರತಿಶಾಸ್ತ್ರ, ಜಾನಪದ ಅಧ್ಯಯನ, ಹಾಗು ಕೆಲವು ವೈಶಿಷ್ಟ್ಯಗಳು ಹೀಗೆ ಕೃತಿಯಲ್ಲಿ ಚರ್ಚಿಇತ ವಿಷಯಗಳು.
ಕನ್ನಡ ಸಾಹಿತ್ಯದ ವಿವಿಧ ಮಜಲುಗಳ ಪ್ರಮುಖ ಮಾಹಿತಿಯನ್ನು ದಾಖಲಿಸಲಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯ ಬಹುಮುಖ ನೆಲೆಗಳನ್ನು ಒಳಗೊಂಡಿದ್ದು, ಕನ್ನಡ ಸಾಹಿತ್ಯದ ಸಮಗ್ರ ಇತಿಹಾಸವನ್ನುಸಂಗ್ರಹಿಸುವ ಪ್ರಯತ್ನವಿದೆ. ಕನ್ನಡ ಸಾಹಿತ್ಯ ಅಧ್ವಯನ ಆಯ್ಕೆ ಮಾಡಿದ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗಿದೆ.
ಕೆ.ಎ.ಎಸ್. ಪ್ರೌಢಶಾಲಾ, ಉಪನ್ಯಾಸಕರ ಸ್ಪರ್ಧಾಕಾಂಕ್ಷಿಗಳ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ ನೀಡುವ ಕನ್ನಡ ಸಾಹಿತ್ಯದ ಗ್ರಂಥವಿದು. ಪೂರ್ವದ ಹಳೆಗನ್ನಡ ಕವಿಗಳಿಂದ ಹಿಡಿದು ಚಂಪು, ವಚನ, ರಗಳೆ, ಷಟ್ಪದಿ, ಕೀರ್ತನೆ, ನವ್ಯ, ನವೋದಯ ಪ್ರಗತಿಶೀಲ, ದಲಿತ ಬಂಡಾಯ, ಹೊಸಗನ್ನಡದ ಸಾಹಿತಿಗಳ ವಿವರಗಳನ್ನುಒದಗಿಸುತ್ತದೆ. ಕನ್ನಡ ಸಾಹಿತ್ಯ ದಿಗ್ಗಜರಾದ ಡಾ.ಎಂ.ಎಂ. ಕಲಬುರಗಿ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ ಬಸವರಾಜ ಸಬರದ ಅವರು ಅರ್ಥಪೂರ್ಣವಾಗಿ ಬೆನ್ನುಡಿ ಬರೆದು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.