ಸಾಮಾನ್ಯ ಅರ್ಥಕ್ಕಿಂತ ವಿಶಿಷ್ಟ ಅರ್ಥ ಕೊಡುವ ಪದಗಳು ಇಂಗ್ಲಿಷ್ ಭಾಷೆಯಲ್ಲಿ ವಿಪುಲವಾಗಿವೆ, ಸಂದರ್ಭಾನುಸಾರ ಈ ನುಡಿಗಟ್ಟುಗಳು ವಿಭಿನ್ನ ಅರ್ಥವನ್ನು ನೀಡುತ್ತದೆ.ಈ ತರದ ಪದಗಳ ಸರಿಯಾದ ಅರ್ಥವನ್ನು ಜನ ಸಾಮಾನ್ಯರಿಗೆ ತಿಳಿಸಲು ಈ ಕೃತಿಯು ಉಪಕಾರಿಯಾಗಿದೆ.ಈ ಕೃತಿಯಲ್ಲಿ ನುಡಿಗಟ್ಟು ಮತ್ತು ಪಡೆನುಡಿಗಳಿಗೆ ಇರಬಹುದಾದ ಸಣ್ಣ ವ್ಯತ್ಯಾಸ ಹಾಗು ಅವುಗಳನ್ನು ಬಳಕೆ ಮಾಡುವ ರೀತಿಯನ್ನು ವಿವರಿಸಲಾಗಿದೆ. ಒಂದು ಪದಕ್ಕೆ ಮತ್ತೊಂದು ಪದ ಸೇರಿ ಪದಗುಚ್ಚವಾದಾಗ ಸಾಮಾನ್ಯ ಅರ್ಥ ನೀಡಿದರೆ ಅದನ್ನು ಪಡೆನುಡಿ ಎಂತಲೂ, ವಿಶೇಷ ಅರ್ಥ ನೀಡಿದರೆ ನುಡಿಗಟ್ಟು ಎಂತಲೂ ಕರೆಯುತ್ತಾರೆ,ಈ ಪುಸ್ತಕ ವಿದ್ಯರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಕಾರಿಯಾಗಿದೆ.
©2025 Book Brahma Private Limited.