ವರ್ಣನಾತ್ಮಕ ವಚನ ಪದಕೋಶ

Author : ಸಂಗಮೇಶ ಸವದತ್ತಿಮಠ

Pages 500

₹ 300.00




Year of Publication: 2010
Published by: ರೂಪರಶ್ಮಿ ಪ್ರಕಾಶನ
Address: ಧಾರವಾಡ

Synopsys

ಡಾ. ಸಂಗಮೇಶ ಸವದತ್ತಿಮಠ ಅವರ ಕೃತಿ-ವರ್ಣನಾತ್ಮಕ ವಚನ ಪದಕೋಶ. ಮೂರನೇ ಪರಿಷ್ಕೃತಿ ಕೃತಿ ಇದು. ವಚನಗಳಲ್ಲಿಯ ವಿಶಿಷ್ಟ ಪದಗಳು, ವೀರಶೈವ ಪಾರಿಭಾಷಿಕ ಪದಗಳು, ಸಾಂದರ್ಭಿಕ ಅರ್ಥಗಳುಳ್ಳ ಪದಗಳು, ಸಮೂಹ ಪದಗಳ ಅರ್ಥ ಮತ್ತು ವಿವರಣೆಗಳನ್ನು ಒಳಗೊಂಡಿದೆ. ಸಾಮಾನ್ಯ, ಸಾಂದರ್ಭಿಕ ಹಾಗೂ ವಚನಕಾರರೇ ಹೇಳಿರುವ ಅರ್ಥ ವಿವರಣೆಗಳಿವೆ. ಪ್ರತಿ ಪದವೂ ಯಾವ ಯಾವ ವಚನಗಳಲ್ಲಿ ನಮೂದಿತವಾಗಿವೆ ಎಂಬುದರ ಮಾಹಿತಿ ಇದೆ. ಅವಶ್ಯವಿದ್ದಲ್ಲಿ ವ್ಯಾಕರಣ, ವಿವರಣೆ ಹಾಗೂ ಪರಿಶೀಲನೆಗೂ ಅವಕಾಶ ಕಲ್ಪಿಸಿದೆ. ವಚನಗಳ ಅರ್ಥ ಸ್ಪಷ್ಟತೆಗೆ ಗಮನ ನೀಡಲಾಗಿದೆ.

About the Author

ಸಂಗಮೇಶ ಸವದತ್ತಿಮಠ
(01 April 1943)

ಡಾ. ಸಂಗಮೇಶ ಸವದತ್ತಿಮಠ ಅವರು  ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು. ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ...

READ MORE

Related Books