ಎಮಿಲಿ ಡಿಕಿನ್‌ಸನ್ ಸುಕನ್ಯ ಕಳಸ ಅವರ ಅನುವಾದಿತ ಕೃತಿಯಾಗಿದೆ. ಡಿಕಿನ್‌ಸನ್‌ಳ ಕವಿತೆಗಳು ಕಾಲದ ವ್ಯಾಪ್ತಿಯನ್ನು ಮೀರಿ ನವ್ಯವಾಗಿವೆ. ಅವಳ ಪಾಲಿಗೆ ಕವಿತೆ ಬರೆಯುವುದು ಹವ್ಯಾಸವಾಗಿ ಉಳಿಯದೆ ಜೀವನ ವಿಧಾನವಾಗಿತ್ತು. ಅವಳ ಕವಿತೆಗಳು ಯಾವುದೇ ಶಬ್ದಾಡಂಬರವಿಲ್ಲದೆ ಮಂತ್ರೋಚ್ಚಾರಣೆಯಂತೆ ಸುಲಲಿತವೂ ದೈನಂದಿನ ಜೀವನದಿಂದ ಎತ್ತಿಕೊಂಡಂಥವೂ ಆಗಿವೆ. ಅವಳು ಕವಿತೆಗಳಲ್ಲಿ ಬಳಸಿದ ಡ್ಯಾಷ್‌ಗಳು ಕವಿತೆಯ ಲಯವನ್ನು ಹೆಚ್ಚಿಸುವಲ್ಲಿ, ಕವಿತೆಯನ್ನು ವಿಭಿನ್ನ ನೆಲೆಗಟ್ಟನಲ್ಲಿ ನೋಡುವಲ್ಲಿ ಸಹಕರಿಸುತ್ತವೆ. ಕವಿತೆಗಳಲ್ಲಿನ ಮಾಂತ್ರಿಕೆ ಲಯಗಾರಿಕೆ ಕವಿತೆಗಳ ಅಂದ ಹೆಚ್ಚಿಸಿದೆ. ಕವಿತೆಗಳಲ್ಲಿನ ನಿರೂಪಕ ಓದುಗರೊಂದಿಗೆ ನೇರಾನೇರ ಸಂಬಂಧ ಸ್ಥಾಪಿಸಿಕೊಳ್ಳುತ್ತಾನೆ. ಇದು ಕವಿತೆಗೆ ಚೇತೋಹಾರಿ ಗುಣ ಒದಗಿಸಿದೆ. ಆಕೆಯ ಬಹುತೇಕ ಕವಿತೆಗಳು ನಿನ್ನೆಯಷ್ಟೇ ಬರೆದು ಮುಗಿಸಿದ್ದೇನೋ ಎನ್ನುವಷ್ಟು ಲವಲವಿಕೆಯಿಂದ ಕೂಡಿವೆ. ಅವಳ ಕವಿತೆಗಳಲ್ಲಿ ಬದಲಾವಣೆ, ಮುಖಾಮುಖಿ, ದುರ್ದೆವ ಮತ್ತು ನಿಗೂಢತೆಯ ಅಂಶಗಳು ಮೇಲೈಸಿವೆ. ಸಾವಿರಾರು ಕವಿತೆಗಳನ್ನು ಬರೆದಿದ್ದ ಎಮಿಅ ಡಿಕಿನ್‌ಸನ್‌ಳ ಕೆಲವೇ ಕವಿತೆಗಳು ಕನ್ನಡಕ್ಕೆ ಅನುವಾದಗೊಂಡಿವೆ. ಈ ಸಂಕಲನದಲ್ಲಿ ಶ್ರೀಮತಿ ಸುಕನ್ಯಾ ಕಳಸರವರು ಅನುವಾದಿಸಿರುವ ನೂರು ಆಯ್ದ ಕವಿತೆಗಳವೆ. ಮೂಲಭಾವವು ಇನಿತೂ ಊನವಾಗದಂತೆ ಅನುವಾದಿತವಾಗಿರುವ ಈ ಕವನಸಂಕಲನವು ಸಂಗ್ರಹಯೋಗ್ಯ, ಮನರಧ್ಯಯನಾರ್ಹ, ಹೃನ್ಮನಸ್ಪರ್ಶಿ ಸಂಗ್ರಹವಾಗಿದೆ.
©2024 Book Brahma Private Limited.