'ಮೌನ ಮಾತಾಗಿ' ಲೇಖಕಿ ಕೆ.ಗಿರಿಜಾ ರಾಜಶೇಖರ ಅವರ ಕವನ ಸಂಕಲನ. ಈ ಸಂಕಲನದಲ್ಲಿ ಪ್ರಾಮಾಣಿಕವಾದ ಅಭಿವ್ಯಕ್ತಿ ,ಲವಲವಿಕೆಯ ಭಾಷೆಯ ಬಳಕೆಯಾಗಿದೆ.ಇದರ ಜೊತೆಗೆ ಶಕ್ತಿಯುತ ರೂಪಕಗಳು ಒಳಗೊಂಡಿವೆ.ಕವನ ಸಂಕಲನದ ಮೂಲಕ ಕಾಲದ ತಲ್ಲಣ ಮತ್ತು ಒಡಲ ಸಂತಸವನ್ನು ಒಟ್ಟಗೆ ಕಟ್ಟಿ ಕೊಟ್ಟಿದ್ದಾರೆ.ಈ ಸಂಕಲನದಲ್ಲಿ ಇಪ್ಪತ್ತೆರಡು ಕವಿತೆಗಳಿವೆ. ಇಲ್ಲಿ ನೆನಪು ,ನೋವು , ಹತಾಶೆ ,ತೊಳಲಾಟ ,ಸಂಕಟ ,ನಿರಾಸೆ , ವಿಷಾದ , ಆಕ್ಷೇಪ,ಪ್ರತಿರೋಧ, ಪರಿಸರ ಪ್ರಜ್ಞೆಯ ಜೊತೆಗೆ ತಾಯಿ ಪ್ರಜ್ಞೆಗಳು ತೆರೆದುಕೊಂಡಿವೆ.ತಾವು ಕಂಡ ಸಮಾಜವನ್ನು ಅದರ ಚೆಲುವು ಮತ್ತು ಸತ್ಯವನ್ನು ಸ್ತ್ರೀತ್ವದ ನೆಲೆಯಿಂದ ನೋಡಿದ್ದಾರೆ. ನಮ್ಮ ದೈನಿಕ ಬದುಕು ಎಲ್ಲವೂ ವ್ಯವಹಾರಿಕವಾಗಿ ಮಾರ್ಪಟ್ಟು ಮಾನವೀಯ ಸಂಬಂಧಗಳು ಪಲ್ಲಟಗೊಂಡಿವೆ. ಹಿಂಸೆ , ಅಸಹಿಷ್ಣುತೆಯ ದುರಿತ ಕಾಲ ಇನ್ನಿಲ್ಲದಂತೆ ಕನಲಿಸುತ್ತಿದೆ. ಕಂಡುಂಡ ಸಂವೇದನೆಗಳನ್ನು ಲೋಕದೊಂದಿಗೆ ಹಂಚಿಕೊಂಡ ಇಲ್ಲಿನ ಕಾವ್ಯದ ವಿನ್ಯಾಸದಲ್ಲಿ ಒಡಲ ಹಾಡಿನ ಅಂತಃಕರಣ , ಬೆಚ್ಚನೆಯ ಕನಸು ,ಜೀವಪರ ಚಿಂತನೆ, ಬಹುತ್ವದ ಆಶಯಗಳನ್ನು ವಿಸ್ತರಿಸುವ ಹೂ ಮನಸ್ಸಿನ ಭಾವಗಳಿವೆ.
©2024 Book Brahma Private Limited.