‘ತ್ಯಾಗಿ’ ಕೃತಿಯು ಎಂ.ವಿ. ನಂಜಪ್ಪ ಅವರ ಕವನಸಂಕಲನವಾಗಿದೆ. ಜಾತೀಯತೆ, ಸ್ವಾರ್ಥಪರ ರಾಜಕೀಯ, ಅಮಾನವೀಯವಾದ ನಡವಳಿಕೆಗಳನ್ನು ಸಾತ್ವಿಕವಾಗಿ ವಿರೋಧಿಸುತ್ತಲೇ, ಅವುಗಳ ಬಗ್ಗೆ ಒಂದು ಎಚ್ಚರಿಕೆಯ ಸಂದೇಶವನ್ನು ಇಲ್ಲಿ ಕವಿ ನೀಡಿದ್ದಾರೆ. ವ್ಯಕ್ತಿಚಿತ್ರಣಗಳು ಸೊಗಸಾಗಿ ಮೂಡಿಬಂದಿದ್ದು, ಇಲ್ಲಿನ ಕೆಲವು ಕವಿತೆಗಳು ಸಂದೇಶವನ್ನು ನೀಡುವ ಜೊತೆಗೆ ಜೀವನ ಮೌಲ್ಯಗಳನ್ನು ತಿಳಿಸುತ್ತದೆ. “ಜೋಕೆ” ಕವಿತೆಯಲ್ಲಿನ ವಿಷಾದಭಾವ ಎಂಥವರನ್ನೂ ಚಿಂತಿಸುವ ಹಾಗೆ ಮಾಡುತ್ತದೆ. “ಪ್ರಕೃತಿ ಆರಾಧಕರು” ಎಂಬ ಪರಿಸರದ ಕುರಿತ ಕವಿತೆಯೂ ಇಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
https://tumakurudigitallibrary.in/publications/thyagi
©2024 Book Brahma Private Limited.