ಪ್ರತೀಕ್ಷೆ ನಾನು ಹಾಡುವ ಹಾಡು ನಾನು ಹಾಡುವ ಹಾಡು ನಿಮ್ಮ ಮನ ಮೆಚ್ಚಿದರೆ ನೂರು ಧನ ಅದುವೆನಗೆ ಬೇರೇನೂ ಬೇಡ ನನಗೆ ಬದುಕಿನಲಿ ಅನುಕ್ಷಣವೂ ಹಾಲಂತೆ ಉಕ್ಕುತಿವೆ ಹಾಡುಗಳು ನನ್ನೆದೆಯ ಆಳದಲ್ಲಿ ನೋವಿನಲ್ಲೂ ಹಾಡು ನಲಿವಿನಲ್ಲೂ ಹಾಡು ಎಲ್ಲವೂ ಇಲ್ಲಿ ಸಮ, ಬಾಳಿನಲ್ಲಿ ಹೇಗೆ ಪುಟಿವುದೋ ಅರಿಯೆ ಹೃದಯದಾಳದಿ ಹಾಡು ಎಲ್ಲವೂ ಅವನದೇ ಆಟವಿಲ್ಲಿ ನಾನು ನನ್ನದು ಎಂಬ ಜಂಭ ಬೇಕಿಲ್ಲೆನಗೆ ನಾನು ಬರೀ ಆಡುತಿಹ ಗೊಂಬೆ ಇಲ್ಲಿ ಹತ್ತುಸಾವಿರ ಹಾಡು ಹಾಡಲೆಂಬಾಸೆಯಿದೆ ಮುಂದಿರುವ ಬಾಳ ಹೆದ್ದಾರಿಯಲ್ಲಿ ಗುರಿಯ ತಲುಪುವವರೆಗೆ ಸ್ಫೂರ್ತಿಯನು ತುಂಬುತಿರು ಬೇಡುವೆನು ದೇವನನು ಭಕ್ತಿಯಲ್ಲಿ (ಕೃತಿಯ ಒಳಗಿಂದ)
©2025 Book Brahma Private Limited.