ಕವಯತ್ರಿ ಗೀತಾ ಭರಮಸಾಗರ ಅವರ ಕವನ ಸಂಕಲನ ಕೃತಿ ʻಬಯಲ ಹೂವುʼ. ಪುಸ್ತಕವು 57 ಕವನಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಗೀತಾ ಅವರಿಗೆ ಕಾಡಿದ ಪ್ರೀತಿ, ಪ್ರೇಮ ಪ್ರಣಯ, ತಾಯಿ, ಪ್ರಕೃತಿ, ಹೆಣ್ತನ, ರೈತ, ರಾಧೆ, ಸ್ವಾಮಿ ವಿವೇಕಾನಂದ, ಪುಟ್ಟರಾಜ ಕವಿ ಗವಾಯಿ, ಬಾಹುಬಲಿ ಮುಂತಾದವರು ಕಾವ್ಯದ ವಸ್ತುವಾಗಿದ್ದಾರೆ. ಕಲೆವು ಕವಿತೆಗಳು ಸ್ತೀ ಸಂವೇದನೆಯ ಹಿನ್ನಲೆಯಲ್ಲಿ ರಚಿತವಾಗಿವೆ. ಹೀಗೆ, ಮನುಷ್ಯ ಸಂಬಂಧಗಳ ಅನಿವಾರ್ಯತೆ, ವಾಸ್ತವದ ಜಗತ್ತಿನ ಚಿತ್ರಣಗಳು ಸಂಕಲನದಲ್ಲಿ ಕಾಣಬಹುದು.
©2025 Book Brahma Private Limited.