ಭಾವಾಭಿವ್ಯತ್ತಿಗೆ ಲಿಂಗತಾರತಮ್ಯವಿಲ್ಲ, ಹಿರಿಕಿರಿಯರೆಂಬ ಬೇಧವಿಲ್ಲ. ಆದರೆ ಅಂತರಂಗದ ಈ ಅನಿಸಿಕೆಗಳು ಭಾವ ರೂಪ ತಾಳಿ ಅನುಭವಗಳಾದಾಗ ಮಾತ್ರ ಅಭಿವ್ಯಕ್ತಿಗೆ ಕಲೆಗಾರಿಕೆ ಬರುತ್ತದೆ. ಕಲೆಗಾರಿಕೆಯಲ್ಲಿ ಕವಿತೆಯೆನ್ನುವುದು ಒಂದು ನೈಪುಣ್ಯಭರಿತ ಕುಸುರಿ ಕಲೆಯೇ ಸರಿ. ಇದು ಸಹಜ ಕಲೆ. ಇಂತಹ ಕಲೆಯನ್ನು ಮೈಗೂಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಅರ್ಚನ ಹಾಸನ. ಬಿ.ಎಸ್‌ಸಿ, ನಾಲ್ಕನೆ ಸೆಮಿಸ್ಟರ್ನ್ ವಿದ್ಯಾರ್ಥಿನಿ. ಹೆಚ್ ಅರ್ಚನಾ ರವರ ಪದ್ಯಗಳಲ್ಲಿ ವಸ್ತು ವೈವಿಧ್ಯತೆ ಇದೆ. ಅದಮ್ಯ ಜೀವನಪ್ರೀತಿಯ ಸಾರವಿದೆ: ಸಾಮಾಜಿಕ ಸಂಬಂಧಗಳ ಕುರಿತ ಕಳಕಳಿಯಿದೆ. ತಾಯಿ ಮಮತೆ ಬಗೆಗಿನ ಓಘವಿದೆ. ಬೀಸುವ ಬಿರುಗಾಳಿಯ ರಭಸವಿದೆ. ಅಂತೆಯೇ ಸುಳಿವ ತಂಗಾಳಿಯ ತಂಪಿದೆ. ಮನಸೆLಏವ ಪ್ರಾಸವಿದೆ. ಕವಯಿತ್ರಿ ಅರ್ಚನ ವಾಚ್ಯಾರ್ಥದ ಸೆಳವಿಂದ ಸೂಚ್ಯಾರ್ಥದೆಡೆ ಸಾಗಿ ಇನ್ನೂ ಉತ್ತಮ ಕವನ ಸಂಕಲನಗಳನ್ನು ಓದುಗರ ಕೈಗಿಡಲೆಂದು ಆಶಿಸುತ್ತೇನೆ ಎಂದು ಸುಶೀಲ ಸೋಮಶೇಖರ್ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.