`ರಿಕ್ತ ನಕ್ಷತ್ರ’ ಕೃತಿಯು ಶ್ರೀರಾಜ್ ಎಸ್. ಆಚಾರ್ಯ(ಕಾವ್ಯ ಬೈರಾಗಿ)ಅವರ ಕವನಸಂಕಲನವಾಗಿದೆ. ಇಲ್ಲಿ ತಾಯಿ ಹಾಗೂ ಮಗುವಿನ ಸಂಬಂಧದ ಕುರಿತ ಕವಿತೆಗಳಿವೆ. ಸಹಜವಾಗಿಯೇ ಬೆಳಕಿನ ಸಮೃದ್ಧಿಯ ಪ್ರತೀಕವಾಗಿರುವ ನಕ್ಷತ್ರವು ಇಲ್ಲಿ ರಿಕ್ತವಾಗಿರಲು ಏನು ಕಾರಣ ಎಂಬ ಕುತೂಹಲಕ್ಕೂ ಕಾರಣವಾಗುತ್ತದೆ.‘ ರಿಕ್ತ ನಕ್ಷತ್ರ’ ಶೀರ್ಷಿಕೆಯ ಕವನವು ಅದಕ್ಕೆ ವಿವರಣೆಯನ್ನೂ ನೀಡುತ್ತದೆ. ನಕ್ಷತ್ರವು ತಾನು ರಿಕ್ತವಾಗಿ ತನ್ನ ಬೆಳಕನ್ನು ಇನ್ನೊಬ್ಬರಿಗೆ ಕೊಡುವ ಬುದ್ಧಿಯನ್ನು ಬೆಳೆಸಿಕೊಂಡದ್ದು ಬೆರಗು ಹುಟ್ಟಿಸುವಂಥದ್ದು. ಅತ್ಯಂತ ಕಡಿಮೆ ಪದಗಳಲ್ಲಿ ಅತ್ಯಂತ ಹೆಚ್ಚು ಹೇಳುವ ಸಾಮರ್ಥ್ಯ ಅವಕ್ಕಿರಬೇಕು. ಪ್ರತಿಮೆ, ರೂಪಕ, ಸಂಕೇತಗಳಿದ್ದಷ್ಟೂ ಕಾವ್ಯದ ಸಂಕೀರ್ಣತೆ ಹೆಚ್ಚಾಗಿ ಅದು ಓದುಗನಿಗೆ ಒಂದು ಗಾಢವಾದ ಅನುಭವ ಕೊಡುತ್ತದೆ.
©2025 Book Brahma Private Limited.