‘ಮನದನಿಯ ಚಿತ್ತಾರ’ ಕೃತಿಯು ದರ್ಶಿನಿ ಪ್ರಸಾದ್ ಅವರ ಕವನಸಂಕಲನವಾಗಿದೆ. ವರ್ಣಮಾಲೆಯ `ಅ’ ದಿಂದ `ಸ’ ದವರೆಗಿನ ಪ್ರತೀ ಅಕ್ಷರದಿಂದಲೂ ಪ್ರಾರಂಭಿಸಿದ ಗುಣಿತಾಕ್ಷರದ ಕವನಗಳನ್ನು ರಚಿಸಿದ್ದು ಕವನಗಳ ಪ್ರತೀ ಸಾಲುಗಳಲ್ಲೂ ವಿಶಿಷ್ಟ ಪದಪ್ರಯೋಗಗಳೊಂದಿಗೆ ಬದುಕಿನ ಏಳು, ಬೀಳುಗಳು, ಸುಖ, ದುಃಖ, ಸಾಧನೆಯ ಪಥದಲ್ಲಿ ಬರುವ ಅಡ್ಡಿ ಆತಂಕಗಳನ್ನು ಹೇಗೆ ನಿವಾರಿಸಿಕೊಂಡು ಮುನ್ನುಗ್ಗಿ ಜಯ ತಮ್ಮದಾಗಿಸಿಕೊಳ್ಳಬೇಕು ಎಂಬ ಸಮಗ್ರ ಚಿಂತನೆಗಳೇ ಪ್ರತಿಬಿಂಬಿಸಿ ಬಹಳ ಅರ್ಥಪೂರ್ಣವಾಗಿ ಓದುಗರ ಮನಸೂರೆಗೊಂಡಿರುವುದಲ್ಲದೇ ಲೇಖಕಿ ಪ್ರೇಮ ಪ್ರಶಾಂತ್ ಅವರು ವ್ಯಕ್ತಿಗತವಾಗಿ ಎಷ್ಟು ಸರಳ ಸಜ್ಜನಿಕೆಯ ಮಹಿಳೆ ಎಂಬುದನ್ನು ನಿರೂಪಿಸುತ್ತದೆ. ಜೀವನ ಮೌಲ್ಯಗಳನ್ನು ಒಳಗೊಂಡು ದುಗುಡ ತುಂಬಿದ ಮನಸ್ಸಿಗೂ ಹೊಸ ಹುರುಪು, ಉಲ್ಲಾಸ ನೀಡಿ ಬದುಕು ನಾವಂದುಕೊಂಡಂತಿಲ್ಲ ಮತ್ತೇನೋ ಇದೆ ನಾವದನ್ನು ಅರಸಬೇಕು, ಅನ್ವೇಷಿಸಬೇಕು ಎನ್ನುವ ತುಡಿತ ಮೂಡಿಸಿ ಇಲ್ಲ ಇದರ ಹೊರತಾದ ಒಳ್ಳೆಯದನ್ನು, ಸದ್ಚಿಂತನೆಗಳಿಗೆ ಮನಸಲ್ಲಿ ಜಾಗ ಕೊಟ್ಟಾಗ ಎಲ್ಲವೂ ಸುಂದರ, ಹಾಗೂ ಸರಳವಾಗಿ ಕಾಣುತ್ತದೆ ಎಂಬ ಆಶಾ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಲ್ಲಿಯೂ, ಯಾವುದೇ ಸಾಲಿನಲ್ಲಿಯೂ ನಕಾರಾತ್ಮಕತೆ ಗೋಚರಿಸದೆ ಕೇವಲ ಆಶಾಭಾವ, ಸಾಕಾರಾತ್ಮಕ ವಿಚಾರ ಧಾರೆಗಳೊಂದಿಗೆ ಎಲ್ಲಾ ಬರಹಗಳೂ ಸಂದೇಶಪೂರ್ಣವಾಗಿವೆ.
©2025 Book Brahma Private Limited.