`ಇನ್ನೂ ಕೊಟ್ಟೆನಾದೊಡೆ’ ಚೆನ್ನಪ್ಪ ಅಂಗಡಿ ಅವರ ಕವಿತೆಗಳ ಸಂಗ್ರಹವಾಗಿದೆ. ಈ ಸಂಕಲನದ 'ಇನ್ನು ಕೊಟ್ಟೆನಾದೊಡೆ', 'ಆಸವ', 'ಹಮ್ಮಿಂಗ್ ಬರ್ಡ್ ಸ್ವಗತ', 'ಒಕ್ಕಲೇಳುವವನ ಒಕ್ಕಣಿಕೆ' - ಕವಿತೆಗಳನ್ನು ಗಮನಿಸಿದರೆ ಚನ್ನಪ್ಪ ಅಂಗಡಿಯವರ ಕಾವ್ಯದೀಕ್ಷೆ ಯಾವ ಬಗೆಯದು ಎಂಬುದು ತಿಳಿಯುತ್ತದೆ. ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರ ಸಾಧ್ಯತೆಗಳನ್ನೆಲ್ಲ ಸೂರೆಮಾಡುವ ಸವಾಲಿಗೆ ಎದುರಾಗಿರುವ ಕವಿಗಳಲ್ಲಿ ಚನ್ನಪ್ಪ ಮುಖ್ಯರು ಎಂಬುದಕ್ಕೆ ಈ ಸಂಕಲನದಲ್ಲಿ ಪುರಾವೆಗಳಿವೆ. ವಚನಗಳ ದಟ್ಟ ಪ್ರಭಾವ, ಸಾನಿಧ್ಯ, ಸಂಸರ್ಗ ಈ ಕವಿಗೆ ಇರುವುದನ್ನು ಇಲ್ಲಿನ ಕಾವ್ಯ ತೋರಿಸುತ್ತದೆ. ಭಾಷೆಯ ಚೆಲುವನ್ನು, ಚಲನೆಯನ್ನು, ಬಂಧ, ಭಾವ, ಬಳುಕು ಬಿನ್ನಾಣಗಳನ್ನು ಅರಿತು, ಆ ಮೂಲಕವೇ ತನ್ನ ಕಾವ್ಯ ಅವತರಿಸಬೇಕೆಂಬ ಹಠಕ್ಕೆ ಕಟ್ಟುಬಿದ್ದಿರುವ ಚನ್ನಪ್ಪ ನಿಷ್ಠೆಯಿಂದ, ನಂಬಿಕೆಯಿಂದ, ಸತತ ಪರಿಶ್ರಮದಿಂದ ಈ ಕಾಯಕದಲ್ಲಿ ತೊಡಗಿರುವದೂ ಇಲ್ಲಿ ಕಾಣಿಸುತ್ತದೆ.
©2025 Book Brahma Private Limited.