‘ಮಾತೆಂದರೆ ಏನು ಗೂಗಲ್?’ ಕೃತಿಯು ನೂತನ ದೋಶೆಟ್ಟಿ ಅವರ ಕವನ ಸಂಕಲನವಾಗಿದೆ. ಈ ಕೃತಿಯು ನಮ್ಮನ್ನು ಆಳವಾಗಿ ತಟ್ಟುವುದು ಅನುಭವದ ಪ್ರಾಮಾಣಿಕತೆ, ಮತ್ತು ಅದರ ಜಾಡನ್ನು ಹಿಡಿದು ನಡೆಸುವ ಹುಡುಕಾಟದಿಂದ. ಆಳದಲ್ಲಿ ಹೇಳಿಕಳೆಯದ ನೋವು ತುಂಬಿರುವಂತೆಯೇ ಬದುಕನ್ನು ಎದುರಿಸುವ ಆತ್ಮವಿಶ್ವಾಸದ ಪರಿಯೂ ಬೆರಗು ಹುಟ್ಟಿಸುತ್ತದೆ. ಇವರು ಸಿಟ್ಟು, ಸೆಡವು ವ್ಯಂಗ್ಯ, ಆಕ್ರೋಶಗಳಲ್ಲಿ ಹರಿಹಾಯುವುದಿಲ್ಲ. ಬದಲಾಗಿ ಆಪ್ತವಾದ ಆತ್ಮ ನಿರೀಕ್ಷೆಯ ಭಾವದಲ್ಲಿ ಸಂವಾದಿಸುತ್ತಾರೆ ಎನ್ನುತ್ತಾರೆ ಕವಿ ಎಸ್.ಜಿ. ಸಿದ್ಧರಾಮಯ್ಯ. ಈ ಕೃತಿಯಲ್ಲಿ ಸಮಾಜವಾದ ಕುತೂಹಲದಿಂದ ಒಳ-ಹೊರಗಿನ ಪ್ರಪಂಚಗಳನ್ನು ವೀಕ್ಷಿಸುತ್ತಾ ಮಾನವೀಯ ನೆಲೆಯಲ್ಲಿ ನೂತನ ಅವರು ತಮ್ಮ ಸ್ಪಂದನೆಗಳನ್ನು ಸರಳ ಸುಂದರವಾಗಿ ದಾಖಲಿಸುತ್ತಾರೆ.
©2025 Book Brahma Private Limited.