ಕಲ್ಪನಾ ಛಾಯೆಯಲ್ಲಿ

Author : ಕಿರಣ ಕೆ. ಗಣಾಚಾರಿ

Pages 108

₹ 120.00




Year of Publication: 2022
Published by: ಸಂಭ್ರಮ ಫೌಂಡೇಶನ್‌
Address: ಇಟಗಿ ಖಾನಾಪೂರ, ಬೆಳಗಾವಿ

Synopsys

‘ಕಲ್ಪನಾಛಾಯೆಯಲ್ಲಿ’ ಕಿರಣ  ಕೆ. ಗಣಾಚಾರಿ ಅವರ ಕವನ ಸಂಕಲನವಾಗಿದೆ. ಕಿರಣ ಗಣಾಚಾರಿ ಅವರ ಸ್ವಾಭಾವಿಕ ಗುಣವಾಗಿರುವ ಕ್ರಿಯಾಶೀಲತೆ ಮತ್ತು ಮನುಷ್ಯ ಬದುಕಿನ ಸವಾಲುಗಳ ಮುಖಾಮುಖಿ ಅವರ ಈ 'ಕಲ್ಪನಾ ಛಾಯೆಯಲಿ...' ಕವನ ಸಂಕಲನದುದ್ದಕ್ಕೂ ಎದ್ದು ತೋರುವ ಗುಣವಿಶೇಷಗಳಾಗಿವೆ ಎಂದರೆ ತಪ್ಪಲ್ಲ. ಪ್ರಕೃತಿಯೆಂಬ ವಿಶಾಲ ಸೃಷ್ಟಿಯಲ್ಲಿ ಮನುಷ್ಯ ಎಷ್ಟು ಸಣ್ಣವನೆಂದು ತೋರಿಸುತ್ತಲೆ ಬೆಲ್ಲದುಂಡೆಯ ನಡುವೆ ಪಾಷಾಣವನ್ನು ಇಟ್ಟು ಮತ್ತೊಬ್ಬರನ್ನು ಕೊಲ್ಲಬಯಸುವ ಅವನ ಕುದ್ರತನವನ್ನೂ ಕವಿ ಬಯಲಿಗೆಳೆಯುತ್ತಾರೆ. ಕಿರಣ ಅವರು ಕಾವ್ಯವನ್ನು ಬರಿ ತಮ್ಮ ಭಾವಾಭಿವ್ಯಕ್ತಿಯ ಸಾಧನವನ್ನಾಗಿ ಪರಿಗಣಿಸದೆ ಸಾಮಾಜಿಕ ಅನಿಷ್ಠಗಳನ್ನು ತೆರೆದಿಡುವ ಸಮರ್ಥ ಸಾಧನವನ್ನಾಗಿ ಬಳಸಿಕೊಳ್ಳುತ್ತಾರೆ. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದವರ ನೇವರಿಕೆ ಸಾಧ್ಯವಾಗದಿದ್ದರೆ ಯಾವ ಸಾಹಿತ್ಯಕ್ಕೂ ಅರ್ಥವಿರುವುದಿಲ್ಲ ಎನ್ನುವ ಆಶಯ ಅವರ ಬಹುತೇಕ ಕವಿತೆಗಳಲ್ಲಿದೆ. 'ಕೆಂಡಸಂಪಿಗೆ', 'ಎನ್ನ ಪಾಡೆನಗಿರಲಿ' ಮುಂತಾದ ಕವನಗಳು ಅವರ ಜೀವನ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಗಳಾಗಿವೆ. ದೇಶ ಕಾಯುವ ಸೈನಿಕರ ಬವಣೆಗಳನ್ನು, ಹೊಲ ಉಳುವ ರೈತರ ನಿಡುಸುಯ್ಯುವಿಕೆಗಳನ್ನು ತಮ್ಮ ಕವಿತೆಯ ಪ್ರತಿಮೆ ರೂಪಕಗಳನ್ನಾಗಿ ಬಳಸಿಕೊಂಡು ನಿರ್ಲಕ್ಷಿತ ವರ್ಗಗಳ ತಲ್ಲಣಗಳನ್ನು ಒಳಗೊಳ್ಳಲು ಅವರು ಪ್ರಯತ್ನಿಸುತ್ತಾರೆ. ಜೀವನ ನಿರ್ವಹಣೆ ಮಾಡಲು ಉಳ್ಳವರ ನಡುವೆ ಉಳ್ಳದವರು ಹೇಗೋಗೋ ಹರಿದ ದೋತರಕೆ ತ್ಯಾಪಿ ಹಾಕಿಕೊಂಡು ಬದುಕಿನ ಶ್ರದ್ಧೆಯನ್ನು ಕಾಪಾಡಿದ್ದಾರೆ ಮತ್ತು ಗಾಂಧಿ ರೂಪಿಸಿದ ಈ ದೇಶವನ್ನು ಬದುಕಿಸಿದ್ದಾರೆ ಎನ್ನುವುದನ್ನು ಈ ಕೃತಿ ಅಭಿವ್ಯಕ್ತಿಸಲು ಯತ್ನಿಸಿದೆ ಎಂದು ನನಗನಿಸುತ್ತದೆ. 'ಜಲಜಲ ಜೋಗ', 'ಸ್ಫೂರ್ತಿ', 'ಕಲಾದರ್ಶಿ' ಮುಂತಾದ ಕವಿತೆಗಳಲ್ಲಿ ಯುವ ಮನಸೊಂದರ ಶಬ್ದತರಂಗಗಳ ಸುಂದರ ಅಭಿವ್ಯಕ್ತಿಯಿದೆ ಎಂದು ಬಸು ಬೇವಿನಗಿಡದ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕಿರಣ ಕೆ. ಗಣಾಚಾರಿ
(20 July 1982)

ಕಿರಣ ಕೆ. ಗಣಾಚಾರಿ ಮೂಲತ: ಇಟಗಿಯವರು . ತಂದೆ ಕಲ್ಲಪ್ಪ ತಾಯಿ ಬಸವ್ವ. ಇವರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ 2006ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಕಥೆ, ಲೇಖನ ಬರೆವಣಿಗೆ ಇವರ ಸಾಹಿತ್ಯ ಪ್ರಕಾರಗಳು, ಅನೇಕ ಪತ್ರಿಕೆಗಳಲ್ಲಿ ಇವರ ಕಚನ, ಕಥೆ, ಲೇಖನಗಳು ಪ್ರಕಟಗೊಂಡಿವೆ. ಕಲ್ಪನಾ ಛಾಯೆಯಲಿ ಇವರ ಕವನ ಸಂಕಲನವಾಗಿದೆ. ಅಮೇರಿಕಾದಲ್ಲಿ ಜರುಗುವ 'ಅಕ್ಕ' ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ 'ದೀಪ ತೋರಿದೆಡೆಗೆ' ಕಥಾ ಸಂಕಲನದ 'ಜಗತ್ತೇ ನೀನು’ ಕೃತಿಗಳು: ದೀಪ ತೋರಿದೆಡೆಗೆ, ಜಗತ್ತೇ ನೀನು, ಕಲ್ಪನಾಛಾಯೆಯಲ್ಲಿ ...

READ MORE

Related Books