ಕವಯತ್ರಿ ಕೆ.ಎನ್.ಲಾವಣ್ಯ ಪ್ರಭಾ ಅವರ ಕವನ ಸಂಕಲನ ಕೃತಿ ʻಗೋಡೆಗಿಡʼ. ನದಿ, ನೀರು, ಮಳೆ, ಆಕಾಶ, ಕಪ್ಪು ಕಟ್ಟಿದ ಮೋಡ, ಸಮುದ್ರ, ಮಣ್ಣು, ಮಲ್ಲಿಗೆ, ಚಂದಿರ ಹೀಗೆ ಪ್ರಕೃತಿಯ ಹಲವಾರು ಸಹಜ ವಿಚಾರಗಳು ಇಲ್ಲಿ ನಲವತ್ತು ಕವಿತೆಗಳಾಗಿ ಮೈದಳೆದಿವೆ. ಸ್ತ್ರೀತ್ವವನ್ನು ಸ್ಥಾಪಿಸುವ ಹಂಬಲ ಉಳ್ಳ ಮತ್ತು ಮನೋಲೋಕದ ನವಿರು, ಸೂಕ್ಷ್ಮಗಳನ್ನು ಕೊಂಚ ಅಳುಕಿನಿಂದಲೇ ಚಿತ್ರಿಸುವ ಯತ್ನವನ್ನು ಲೇಖಕರು ಮಾಡಿದ್ದಾರೆ. ಅಮ್ಮನನ್ನು ಸಮುದ್ರಕ್ಕೆ, ನೀರನ್ನು ಪುರುಷನಿಗೆ ಹೋಲಿಸಿ ವರ್ಣಿಸಲಾಗಿದೆ. ಹೀಗೆ ಹಲವು ಬಗೆಯ ಸಂಬಂಧಗಳನ್ನು, ಬದುಕಿನ ದಿನ ನಿತ್ಯದ ಚಿತ್ರಗಳನ್ನು ಬಳಸಿಕೊಂಡು ಅವರು ಅರ್ಥಪೂರ್ಣವಾದ ಸುಂದರ ಕವಿತೆಗಳನ್ನು ರಚಿಸಿದ್ದಾರೆ. ಇಲ್ಲಿನ ಕೆಲವು ಕವಿತೆಗಳು ವಾಚ್ಯವಾಗಿ ಕೊನೆಗೊಳ್ಳುತ್ತಿದ್ದು, ಅದು ಅವುಗಳ ಮಿತಿಯನ್ನು ಸೂಚಿಸುತ್ತದೆ. ಪುಸ್ತಕದ ಪರಿವಿಡಿಯಲ್ಲಿ; ಅಮ್ಮ ಮತ್ತು ಸಮುದ್ರ, ನೀರಪಾತ್ರ, ಯುಗಾದಿ, ಜಗುಲಿಕಟ್ಟೆ, ಉತ್ಸವ, ಅಜ್ಜಿ ಮುಂತಾದ ಶೀರ್ಷಿಕೆಗಳ ಕವನಗಳಿವೆ.
©2025 Book Brahma Private Limited.