‘ದೆಸೆಯಿಂದ’ ಜಿಯಾಉಲ್ಲಾ ಕೆ ಹೊಸಹಳ್ಳಿ ಅವರ ರಚನೆಯ ಕವನಸಂಕಲನವಾಗಿದೆ. ಈ ಕವಿಯ ಕವಿತೆಗಳ ಆಳಕ್ಕಿಳಿದು ಧ್ಯಾನಿಸಿದಾಗ ಇವರ ಬಹುತೇಕ ಕವಿತೆಗಳು ಪ್ರೀತಿಯ ಸುತ್ತ ಗಿರಕಿ ಹೊಡೆದಂತೆ ಕಂಡು ಬಂದರೂ ಅಭಿವ್ಯಕ್ತಿಸುವ ರೀತಿಯಲ್ಲಿ ತಮ್ಮದೇ ವಿಭಿನ್ನ, ನೂತನ ಮಾರ್ಗವನ್ನು ಕಂಡುಕೊಳ್ಳುವ ತಹತಹಿಕೆಯಂತೂ ಎದ್ದು ಕಾಣುತ್ತದೆ. ವಿವಿಧ ಬಗೆಯ ರೂಪಕ, ಪ್ರತಿಮೆಗಳ ಪ್ರಯೋಗದ ಮುಖೇನ ಇಲ್ಲಿಯ ನಿರೂಪಕ ಗಮನ ಸೆಳೆಯುತ್ತಾರೆ ಎಂದು ಖ್ಯಾತ ಚಲನಚಿತ್ರ ಸಾಹಿತಿ ಹೃದಯಶಿವ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.