‘ಹೇಳದೇ ಉಳಿದದ್ದು!’ ಸೌಮ್ಯ ಕಾಶಿ ಅವರು ಬರೆದ ಒಲವ ಕವಿತೆಗಳ ಸಂಗ್ರಹವಾಗಿದೆ. 32 ಪುಟಗಳಿರುವ ಈ ಪುಟಾಣಿ ಪುಸ್ತಕದಲ್ಲಿ ಪ್ರತೀ ಕವಿತೆಗಳೂ ಚಂದದ ಚಿತ್ರವನ್ನು ಹೊಂದಿವೆ. ಈ ಯಾಂತ್ರಿಕ ಬದುಕಿನಲ್ಲಿ ಪ್ರೀತಿ ಪಾತ್ರರಿಗೆ ಹೇಳಲು ಆಗದೇಹೋದ ಅಥವಾ ಹೇಳದೇ ಉಳಿದ ಭಾವನೆಗಳನ್ನು ಹೇಳಿಕೊಳ್ಳಲು ಈ ಪುಸ್ತಕ ಒಂದು ಒಳ್ಳೆಯ ನೆಪ. ಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನಾ ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆ. ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಬಹುದಾ!? ಮಾತಾಗಿ, ಕವಿತೆಯಾಗಿ ಹೊರಬಂದ ಅದೆಷ್ಟೋ ಭಾವನೆಗಳು ಹಾಗೇ ಉಳಿದು ಹೋಗಿವೆ ಮನಸೆಂಬ ಸಂಚಿಯಲ್ಲಿ, ಓದಬೇಕಿದೆ ಅವುಗಳನ್ನು ನಾವು ಮೆಲುದನಿಯಲ್ಲಿ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.