ನೂರ್ ಜಹಾನ್ ರೇ ತಮ್ಮ ಕವನ 'ಜೀವನ ದರ್ಶನ' ವೆಂದಿದ್ದಾರೆ, ಇಂತಹ ಕೆಲ ಕವನಗಳಲ್ಲಿ ತಾನೇಕೆ ಬರೆದೆ, ಬರೆಯುತ್ತಿರುವೆನೆಂದು ಸಾಬೀತು ಪಡಿಸ್ತಿದ್ದಾರೆ ಕೂಡ, ಜೀವನದ ಅಪೂರ್ಣತೆಯ ಕೊರಗು, 'ಈ ಜೀವನ' ಎಂಬ ಕವಿತೆಯಲ್ಲಿದೆ, ಇದೇ ನೋವು ಬೇರೆ ಬೇರೆ ಪದಗಳಲ್ಲಿ ವ್ಯಕ್ತಗೊಳಿಸಿದ್ದಾರೆ, 'ಏನೋ ಬೇಕೆನಿಸಿದೆ' ಇವೆಲ್ಲಾ ಒಂದೇ ನೋವು, ತಳಮಳ, ಬರೀ ಭಾವ ತೀವ್ರತೆ ಕವನವಾಗಲಾರದು, ಭಾಷೆಯ ಕೌಷಲ್ಯದಿಂದ ಸಮರ್ಪಕವಾಗಿ ನಿರೂಪಿಸಿದ್ರೆ ಒಳ್ಳೆಯ ಕವಿತೆ ರೂಪಗೊಳ್ಳುತ್ತದೆ, 'ಅಂದು-ಇಂದು' ಎಂಬ ಕವನದಲ್ಲಿ ಸಂಕೋಲೆಯ ಬಂಧಿಯಾದೆ ಎಂಬ ಅರ್ಥವನ್ನು ತರಲು ಯತ್ನಿಸಿದ್ದಾರಷ್ಟೇ, ಮಹಿಳೆಯ ಕೌಟುಂಬಿಕ ಹಾಗೂ ಸಾಮಾಜಿಕ ಪರಿಮಿತಿಯ ಹೇಳುವ ಹಂಬಲವಿದೆ, 'ಕವಿಯಾಗುವುದಕ್ಕೆ' ಕವನದಲ್ಲಿ ಲೇಖಕಿಯೆ ಹೇಳಿಕೊಂಡಂತೆ ಕವಿಯಾಗಲು ನೋವು, ನಲಿವಿನ ತುತ್ತ ತುದಿಯಲ್ಲಿರಬೇಕೆಂದು ಊಹಿಸುತ್ತಾರೆ, ಸಂಘರ್ಷವಿಲ್ಲದಿದ್ರೆ ಕಾವ್ಯವಿಲ್ಲ ನಿಜ, ಆದ್ರೆ ಉತ್ತಮ ಕಾವ್ಯವಾಗಬೇಕಾದ್ರೆ ಮಾತುಗಾರಿಕೆಯ ವಿಭಿನ್ನ ಮಜಲುಗಳಾಗದೆ, ಅರ್ಥದ ವಿಭಿನ್ನ ಪದರುಗಳಲ್ಲಿನ ಧ್ವನಿಯಾಗಿರಬೇಕು ಎಂಬ ಗಮನ ಕೊಟ್ಟಿಲ್ಲ ಎನ್ನುತ್ತಾರೆ ರಜಿಯಾ, ಡಿ, ಬಿ.
©2024 Book Brahma Private Limited.