'ಬದುಕಿನ ಬಣ್ಣಗಳು' ದಕಥಾ ಸಂಕಲನದಲ್ಲಿರುವ 50 ಕಥೆಗಳೂ ಸಹ ವಿಭಿನ್ನವಾಗಿದ್ದು, ಯಾವುದೇ ಸಿದ್ಧ ಚೌಕಟ್ಟಿಗೆ ಸೀಮಿತವಾಗದೆ ಲಘುಹಾಸ್ಯ, ವೈಚಾರಿಕತೆ, ಗಂಭೀರ, ಅನುಭವ ಕಥನ, ನೈಜ ಘಟನೆ ಆಧಾರಿತ ಕಥೆಗಳು, ನೀತಿ ಕಥೆಗಳು, ಹಾರರ್ ಮೊದಲಾದ ಬದುಕಿನ ವಿವಿಧ ಬಣ್ಣದ ಚಿತ್ರಗಳನ್ನು ಒಳಗೊಂಡಿವೆ. ಕೆಲವು ಪಾತ್ರಗಳ ಹೆಸರುಗಳು ಹಾಗೂ ಕಥೆಗಳ ಶೀರ್ಷಿಕೆಗಳು ವಿಭಿನ್ನವಾಗಿದ್ದು, ನಮ್ಮನ್ನು ಓದಲು ಪ್ರೇರೇಪಿಸುವಂತಿವೆ. ಇಲ್ಲಿರುವ ಕಥೆಗಳನ್ನು ಕೇವಲ ಕಥೆಗಲೆಂದು ಒಡಲಾಗುವುದಿಲ್ಲ. ಕಥೆಗಳಲ್ಲಿರುವ ಪರಿಣಾಮಕಾರಿ ನಿರೂಪಣೆಯಿಂದಾಗಿ ಪಾತ್ರಗಳು ನಕ್ಕಾಗ ನಾವೂ ನಕ್ಕು, ಅತ್ತಾಗ ನಾವೂ ಭಾವುಕರಾಗಿ ಕಥೆಯಲ್ಲಿ ಲೀನವಾಗಿ ಬಿಡುತ್ತೇವೆ. ಹೀಗೆ ನಮ್ಮನ್ನು ಭಾವನೆಗಳ ಕಡ್ಡಾಳಲ್ಲಿ ಲೇಲಿಸುವ ಕಥೆಗಳ ಸ್ವಾರಸ್ಯವನ್ನು ಓಡಿಯೇ ಅನುಭವಿಸಬೇಕು. ಲೇಖಕರ ಮೊದಲ ಕೃತಿ 'ವೃತ್ತಿ ವೃತ್ತ'ದಂತೆ 'ಬದುಕಿನ ಬಣ್ಣಗಳು' ಕಥಾಸಂಕಲನವೂ ಸಹ ಓಡುಗಾರರ ಮನಮುತ್ತುವುದರಲ್ಲಿ ಸಂಶಯವಿಲ್ಲ. -ಸುಮಾ ರಘುನಂದನ್ ಬೆಂಗಳೂರು
©2024 Book Brahma Private Limited.